• November 29, 2021

ಶುರುವಾಗ್ತಿದೆ ರಣ..ರೌಧ್ರ..ರುಧಿರನ ಆರ್ಭಟ…

ಶುರುವಾಗ್ತಿದೆ ರಣ..ರೌಧ್ರ..ರುಧಿರನ ಆರ್ಭಟ…

ಎಸ್.ಎಸ್.ರಾಜಮೌಳಿ ತಂಡದಿಂದ‌‌ ಹೊಸ ಸುದ್ದಿಯೊಂದು ಹೊರ ಬಂದಿದೆ. ಟೀಸರ್ ಹಾಗೂ ಹಾಡಿನ ಮೂಲಕ ಕುತೂಹಲ ಹುಟ್ಟುಹಾಕಿದ್ದ ಆರ್ ಆರ್ ಆರ್ ಚಿತ್ರದ ಟ್ರೇಲರ್ ರಿಲೀಸ್ ಡೇಟ್ ಅನೌನ್ಸ್ ಆಗಿದೆ…. ಡಿಸೆಂಬರ್ 3 ರಂದು ರಾಜಮೌಳಿಯ ಆರ್ ಆರ್ ಆರ್ ಸಿನಿಮಾ ಟ್ರೇಲರ್ ರಿಲೀಸ್ ಆಗ್ತಿದೆ.

ಪಂಚ ಭಾಷೆಯಲ್ಲಿ ತಯಾರಾಗ್ತಿರುವ ಆರ್ ಆರ್ ಆರ್ ಸಿನಿಮಾ ಮೇಲೆ ಭಾರತೀಯ ಚಿತ್ರರಂಗದ ಚಿತ್ತ ನೆಟ್ಟಿದೆ. ಜಕ್ಕಣ್ಣನ ಸಿನಿಮಾ ಅಂದ್ಮೇಲೆ ಆ ನಿರೀಕ್ಷೆ ದುಪ್ಪಟ್ಟಾಗಿರುತ್ತದೆ. ಇದೀಗ ಅಂತಹದ್ದೇ ನಿರೀಕ್ಷೆ ಆರ್ ಆರ್ ಆರ್ ಮೇಲಿದೆ.

ಜೂನಿಯರ್ ಎನ್ ಟಿಆರ್, ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್ ಸೇರಿದಂತೆ ದೊಡ್ಡ ತಾರಾಬಳಗ ಆರ್ ಆರ್ ಆರ್ ಸಿನಿಮಾದಲ್ಲಿದೆ. ಎಂ ಎಂ ಕೀರವಾಣಿ ಮ್ಯೂಸಿಕ್ …ಸೆಂಥಿಲ್ ಕ್ಯಾಮೆರಾ ಕೈಚಳಕವಿರುವ ಆರ್ ಆರ್ ಆರ್ ಸಿನಿಮಾ ಜನವರಿ 7 ರಂದು ವರ್ಲ್ಡ್ ವೈಡ್ ತೆರೆಗೆ ಬರ್ತಿದೆ…

ಡಮಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ‌ ಮಾಲಯಾಳಂ ಭಾಷೆಯಲ್ಲಿ ಏಕಕಾಲಕ್ಕೆ ಆರ್ ಆರ್ ಆರ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಲಿದ್ದು,
ಕನ್ನಡದಲ್ಲಿಯೂ ರಿಲೀಸ್ ಆಗ್ತಿರುವ ಆರ್ ಆರ್ ಆರ್ ಸಿನಿಮಾದ ವಿತರಣೆ ಹಕ್ಕುನ್ನು ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಕೆವಿಎನ್ ಪಡೆದುಕೊಂಡಿದೆ. ರಾಜ್ಯಾದ್ಯಂತ ಆರ್ ಆರ್ ಆರ್ ಸಿನಿಮಾವನ್ನು ಕೆವಿಎನ್ ರಿಲೀಸ್ ಮಾಡಲಿದೆ.

Leave a Reply

Your email address will not be published. Required fields are marked *