• February 11, 2022

ಮುಂಬಯಿ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡ ರಾಕಿ ಭಾಯ್

ಮುಂಬಯಿ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡ ರಾಕಿ ಭಾಯ್

ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗಷ್ಟೇ ಕುಂದಾಪುರದಲ್ಲಿ ಕೆಜಿಎಫ್ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಭಾಗಿಯಾಗಿದ್ರು… ಅದಾದ ನಂತರ ಅಲ್ಲೆ ಇರುವ ದೇವಾಲಯಗಳಿಗೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ರು…ಆದ್ರೆ ಈಗ ಯಶ್ ಏಕಾಏಕಿ ಮುಂಬೈ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ…

ಯಶ್ ಏರ್ ಪೋರ್ಟ್ ನಲ್ಲಿರುವ ಫೋಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ… ಅಷ್ಟಕ್ಕೂ ಯಶ್ ಮುಂಬೈಯಲ್ಲಿ ಏನ್ ಮಾಡುತ್ತಿದ್ದಾರೆ ಎನ್ನುವ ಕುತೂಹಲ ಸಾಕಷ್ಟು ಜನರಿಗಿತ್ತು ಅದಕ್ಕೆ ಉತ್ತರ ಕೆಜಿಎಫ್ ಎನ್ನುತ್ತಿದ್ದಾರೆ ಮುಂಬೈ ಮಂದಿ…

ಹೌದು ಈಗಾಗಲೇ ಸಿನಿಮಾತಂಡ ಅನೌನ್ಸ್ ಮಾಡಿರುವಂತೆ ಕೆಜಿಎಫ್ ಚಾಪ್ಟರ್ 2ಸಿನಿಮಾ ಏಪ್ರಿಲ್ ನಲ್ಲಿ ತೆರೆಗೆ ಬರಲಿದೆ.. ಈಗ ಸಿನಿಮಾ ಬಿಡುಗಡೆ ಆಗಲು ಇನ್ನೂ 2ತಿಂಗಳು ಬಾಕಿ ಇದ್ದು ಸಿನಿಮಾತಂಡ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ…

ಎಲ್ಲರಿಗೂ ತಿಳಿದಿರುವಂತೆ ಕೆಜಿಎಫ್ ಸಿನಿಮಾಗೆ ಹೊಂಬಾಳೆ ಸಂಸ್ಥೆ ಬಂಡವಾಳ ಹಾಕಿದ್ದು ಅದರ ಜತೆಗೆ ಬಾಲಿವುಡ್ ಮಂದಿಯೂ ಕೂಡ ಸಿನಿಮಾ ಮೇಲೆ ಹೂಡಿಕೆ ಮಾಡಿದ್ದಾರೆ… ಆದ್ದರಿಂದ ಮೊದಲಿಗೆ ಕೆಜಿಎಫ್ ಸಿನಿಮಾದ ಪ್ರಚಾರ ಮುಂಬಯಿಯಿಂದಲೇ ಆರಂಭವಾಗುತ್ತಿದೆ …

ಇನ್ನು ಕಳೆದ ಬಾರಿ ಕೆಜಿಎಫ್ ಚಾಪ್ಟರ್ 1 ಸಿನಿಮಾ ಹಿಂದಿಯಲ್ಲಿ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿತ್ತು ಹಾಗಾಗಿ ಈ ಬಾರಿಯೂ ಕೂಡ ಅಲ್ಲಿಯ ಪ್ರೇಕ್ಷಕರಿಗೆ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ ಅದಕ್ಕಾಗಿ ಮೊದಲಿಗೆ ಅಲ್ಲಿಂದಲೇ ಪ್ರಚಾರ ಶುರು ಮಾಡಲು ಸಿನಿಮಾ ತಂಡ ಪ್ಲಾನ್ ಮಾಡಿದ್ದು ಅದಕ್ಕಾಗಿ ರಾಕಿಂಗ್ ಸ್ಟಾರ್ ಈಗಾಗಲೇ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ

ಕೆಜಿಎಫ್ ಸಿನಿಮಾದಲ್ಲಿ ಯಶ್, ಶ್ರೀನಿಧಿ ಶೆಟ್ಟಿ ,ಪ್ರಕಾಶ್ ರೈ ,ಮಾಳವಿಕಾ, ಸಂಜಯ್ ದತ್ ,ರವೀನಾ ಟಂಡನ್ ಸೇರಿದಂತೆ ಇನ್ನೂ ಅನೇಕ ಕಲಾವಿದರು ಅಭಿನಯ ಮಾಡಿದ್ದಾರೆ ಚಿತ್ರಕ್ಕೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ರೆ ಭುವನ್ ಗೌಡ ಕ್ಯಾಮೆರಾ ವರ್ಕ್ ಸಿನಿಮಾಗಿದೆ ಒಟ್ಟಾರೆ ಸಿನಿಮಾ ಏಪ್ರಿಲ್ ನಲ್ಲಿ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಿಲೀಸ್ ಆಗಲಿದ್ದು ಪ್ರೇಕ್ಷಕರು ಇಷ್ಟು ದಿನದಿಂದ ಕಾಯುತ್ತಿದ್ದಂತ ಕಾತುರಕ್ಕೆ ತೆರೆ ಬೀಳಲಿದೆ

Leave a Reply

Your email address will not be published. Required fields are marked *