- February 1, 2022
ಹೃತಿಕ್ ಬಾಳಿಗೆ ಎಂಟ್ರಿ ಕೊಟ್ಟ ಹೊಸ ಹುಡುಗಿ ಇವಳೇನಾ ?

ಬಾಲಿವುಡ್ ನ ಸ್ಟಾರ್ ನಟ ಹೃತಿಕ್ ರೋಷನ್ ಈಗಾಗ್ಲೇ ತಮ್ಮ ಪತ್ನಿಗೆ ವಿಚ್ಛೇದನ ನೀಡಿರುವುದು ಹಳೇ ವಿಚಾರ… ವಿಚ್ಛೇದನ ನೀಡಿದ ನಂತರ ಬೇರೆ ಹುಡುಗಿಯರ ಜೊತೆ ಡೇಟ್ ಮಾಡುವ ವಿಚಾರಗಳು ಹೊರಗೆ ಬರಬಾರದು ಎನ್ನುವ ನಿಟ್ಟಿನಲ್ಲಿ, ಸುಸೇನ್ ಹಾಗೂ ಹೃತಿಕ್ ಆಗಾಗ ಮಕ್ಕಳ ಜತೆ ಇರುವ ಫೋಟೋಗಳನ್ನು ಶೇರ್ ಮಾಡುತ್ತಿದ್ದರು…

ಆದರೆ ಇತ್ತೀಚಿಗಷ್ಟೆ ನಟ ಹೃತಿಕ್ ರೋಷನ್ ನಟಿಯೊಬ್ಬರ ಜೊತೆ ರೆಸ್ಟೋರೆಂಟ್ ನಿಂದ ಹೊರಬರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ ..
ಫೋಟೋದಲ್ಲಿ ಹೃತಿಕ್ ರೋಷನ್ ಅವರ ನಟಿಯ ಕೈ ಹಿಡಿದುಕೊಂಡು ರೆಸ್ಟೋರೆಂಟ್ ನಿಂದ ಹೊರಗೆ ಕರೆದುಕೊಂಡು ಬರ್ತಾ ಇದ್ದಾರೆ…ಅಷ್ಟಕ್ಕೂ ಈ ಫೋಟೋದಲ್ಲಿ ಇರೋ ನಟಿ ಮತ್ಯಾರು ಅಲ್ಲ ಸಬಾ ಅಜಾದ್ …ಈ ಫೋಟೋಗಳನ್ನ ನೋಡಿರುವ ನೆಟ್ಟಿಗರು ಇವರಿಬ್ಬರೂ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

ಇನ್ನೂ ಸಭಾ ಆಝಾದ್ ಕೆಲವು ಸಿನಿಮಾಗಳು ಹಾಗೂ ಧಾರಾವಾಹಿಗಳಲ್ಲಿ ಅಭಿನಯ ಮಾಡಿದ್ದು ಉತ್ತಮ ಗಾಯಕಿಯೂ ಆಗಿದ್ದಾರೆ..ಸದ್ಯ ಓಟಿಟಿಯಲ್ಲಿ ತೆರೆಗೆ ಬರಲು ಸಿದ್ದವಾಗಿರೋ ರಾಕೆಟ್ ಬಾಯ್ಸ್ ಎಂಬ ಸೀರಿಸ್ ನಲ್ಲಿ ಸಬಾ ಅಭಿನಯ ಮಾಡುತ್ತಿದ್ದಾರೆ..
