• February 10, 2022

ಮಹೇಶ್ ಬಾಬು ವೆಡ್ಡಿಂಗ್ ಆ್ಯನಿವರ್ಸರಿ ಗೆ ಸಿಕ್ತು ಭರ್ಜರಿ ಗಿಫ್ಟ್

ಮಹೇಶ್ ಬಾಬು ವೆಡ್ಡಿಂಗ್ ಆ್ಯನಿವರ್ಸರಿ ಗೆ ಸಿಕ್ತು ಭರ್ಜರಿ ಗಿಫ್ಟ್

ಟಾಲಿವುಡ್ ನ ಸೂಪರ್ ಸ್ಟಾರ್ ಮಹೇಶ್ ಬಾಬು ಹಾಗೂ ನಮ್ರತಾ ಅವರಿಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ….17 ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಣೆ ಮಾಡಿಕೊಳ್ಳುತ್ತಿರುವ ಮಹೇಶ್ ಬಾಬು ಅವರಿಗೆ ಈ ವರ್ಷ ಮರೆಯಲಾಗದಂತಹ ಉಡುಗೊರೆ ಸಿಕ್ಕಿದೆ …

ಅಷ್ಟಕ್ಕೂ ಮಹೇಶ್ ಬಾಬು ಅವರಿಗೆ ಈ ಮೆಮೋರೆಬಲ್ ಗಿಫ್ಟ್ ಸಿಕ್ಕಿರುವುದು ಪತ್ನಿ ನಮ್ರತಾ ಅವರಿಂದ ಅಲ್ಲ… ಟಾಲಿವುಡ್ ದಿಗ್ಗಜರು ಮಹೇಶ್ ಬಾಬು ಅವರ ವಿವಾಹ ವಾರ್ಷಿಕೋತ್ಸವವನ್ನ ಎಂದೆಂದಿಗೂ ನೆನಪಿನಲ್ಲಿ ಉಳಿಸಿಕೊಳ್ಳುವಂತೆ ಮಾಡಿದ್ದಾರೆ …

ಮಹೇಶ್ ಬಾಬು ಅವರ ವಿವಾಹ ವಾರ್ಷಿಕೋತ್ಸವದ ದಿನ ಟಾಲಿವುಡ್ ನ ದಿಗ್ಗಜ ನಿರ್ದೇಶಕರಾದ ಎಸ್ ಎಸ್ ರಾಜಮೌಳಿ,ಕೊರಟಾಲ ಶಿವ ಹಾಗೂ ಕಲಾವಿದರಾದ ಪ್ರಭಾಸ್ .ಚಿರಂಜೀವಿ ಮತ್ತು ನಿರಂಜನ್ ರೆಡ್ಡಿ ಇವರೆಲ್ಲರೂ ಭೇಟಿ ಮಾಡಿ ಶುಭ ಹಾರೈಸಿದ್ದಾರೆ…

ಎಲ್ಲರೊಟ್ಟಿಗೆ ಇರುವ ಫೋಟೋವನ್ನು ಶೇರ್ ಮಾಡಿರುವಂತಹ ಮಹೇಶ್ ಬಾಬು ಇದು ಎಂದೆಂದಿಗೂ ನೆನಪಿನಲ್ಲಿ ಉಳಿದು ಕೊಳ್ಳುವ ವಾರ್ಷಿಕೋತ್ಸವ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಮೇತ ಬರೆದುಕೊಂಡಿದ್ದಾರೆ …

Leave a Reply

Your email address will not be published. Required fields are marked *