- December 31, 2021
ಹಾಲಿನಂಥ ಮನಸ್ಸಿನ ನಟನಿಗೆ ಸಿಕ್ತು ಕೆಎಮ್ ಎಫ್ ನಿಂದ ಗೌರವ

ನಟ ಪುನೀತ್ ರಾಜ್ ಕುಮಾರ್ ಅಭಿಮಾನಿಗಳನ್ನ ಅಗಲಿ 2ತಿಂಗಳು ಕಳೆದಿವೆ… ಇಂದಿಗೂ ಕೂಡ ಅಭಿಮಾನಿಗಳು ಹಾಗೂ ಜನಸಾಮಾನ್ಯರು ಪುನೀತ್ ಇನ್ನಿಲ್ಲ ಅನ್ನೋದನ್ನ ನಂಬಲು ತಯಾರಿಲ್ಲ…ಆದರೆ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಕೆಎಂಎಫ್ ಸಂಸ್ಥೆ ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಪುನೀತ್ ಭಾವಚಿತ್ರವನ್ನ ಪ್ರಿಂಟ್ ಮಾಡಿದೆ …

ಪುನೀತ್ ರಾಜ್ ಕುಮಾರ್ ಬದುಕಿರುವಾಗ ಸಾಕಷ್ಟು ಸರ್ಕಾರಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು.. ಹಲವು ಯೋಜನೆಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ದರು… ಸರ್ಕಾರಿ ಜಾಹೀರಾತುಗಳ ಗಳಿಗೆ ಪುನೀತ್ ಎಂದಿಗೂ ಸಂಭಾವನೆಯನ್ನ ಪಡೆಯುತ್ತಿರಲಿಲ್ಲ…ಅದೇ ರೀತಿಯಲ್ಲಿ ನಂದಿನಿ ಸಂಸ್ಥೆಗೆ ಕೂಡ ಪುನೀತ್ ಸಾಕಷ್ಟು ಕಾಲ ರಾಯಭಾರಿಯಾಗಿದ್ದರು ಅಲ್ಲಿಯೂ ಕೂಡ ಸಂಭಾವನೆ ಪಡೆಯದೇ ಕೆಲಸ ಕೆಲಸ ಮಾಡಿದ್ದರು… ಹಾಗಾಗಿ ನಂದಿನಿ ಸಂಸ್ಥೆ ಹಾಲಿನ ಪ್ಯಾಕೆಟ್ ಮೇಲೆ ಪುನೀತ್ ಭಾವಚಿತ್ರ ಮುದ್ರಿಸುವ ಮೂಲಕ ತಮ್ಮ ಗೌರವ ಸಲ್ಲಿಸಿದೆ ..

ಕೇವಲ ಪುನೀತ್ ರಾಜ್ ಕುಮಾರ್ ಮಾತ್ರವಲ್ಲದೆ ರಾಜ್ ಕುಮಾರ್ ಕುಟುಂಬ ನಂದಿನಿ ಸಂಸ್ಥೆಗೆ ರಾಯಭಾರಿಯಾಗಿ ಸಾಕಷ್ಟು ವರ್ಷಗಳ ಕಾಲ ಕೆಲಸ ಮಾಡಿದೆ…ಡಾಕ್ಟರ್ ರಾಜ್ ಕುಮಾರ್ ಅವರು ಸಾಕಷ್ಟು ವರ್ಷಗಳು ನಂದಿನಿ ಸಂಸ್ಥೆಗೆ ರಾಯಭಾರಿಯಾಗಿದ್ದರು… ಅನಂತರ ಈ ಸಂಪ್ರದಾಯವನ್ನು ಪುನೀತ್ ರಾಜ್ ಕುಮರ್ ಮುಂದುವರಿಸಿಕೊಂಡು ಬಂದಿದ್ದರು..ಆದ್ದರಿಂದ ನಂದಿನಿ ಸಂಸ್ಥೆಗೂ ಹಾಗೂ ರಾಜ್ ಕುಮಾರ್ ಕುಟುಂಬಕ್ಕೂ ಸಾಕಷ್ಟು ವರ್ಷಗಳಿಂದ ಅವಿನಾಭಾವ ನಂಟು ಬೆಳೆದುಕೊಂಡು ಬಂದಿದೆ… ಹಾಗಾಗಿ ಸಂಸ್ಥೆ ಪುನೀತ್ ಭಾವಚಿತ್ರ ಮುದ್ರಿಸುವ ಮೂಲಕ ತಮ್ಮ ಗೌರವ ಸಲ್ಲಿಸಿದ್ದಾರೆ ಅಭಿಮಾನಿಗಳು ಈ ಭಾವಚಿತ್ರವನ್ನು ಕಂಡು
