• January 21, 2022

ನಿನ್ನೆಯ ಎಪಿಸೋಡ್ ನಲ್ಲಿ ಕಾಣಿಸಿಕೊಳ್ಳದ “ಭುವಿ” ಕನ್ನಡತಿ ಅಭಿಮಾನಿಗಳಿಗೆ ಆತಂಕ

ನಿನ್ನೆಯ ಎಪಿಸೋಡ್ ನಲ್ಲಿ ಕಾಣಿಸಿಕೊಳ್ಳದ “ಭುವಿ” ಕನ್ನಡತಿ ಅಭಿಮಾನಿಗಳಿಗೆ ಆತಂಕ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡತಿ ಧಾರಾವಾಹಿ ಸಾಕಷ್ಟು ಪ್ರಖ್ಯಾತಿಯನ್ನು ಗಳಿಸಿದೆ.. ಅದಷ್ಟೇ ಅಲ್ಲದೆ ಈ ಧಾರಾವಾಹಿಗೆ ಅಪಾರ ಅಭಿಮಾನಿ ಬಳಗ ಕೂಡ ಇದೆ …

ಧಾರಾವಾಹಿಯಲ್ಲಿ ಹರ್ಷನ ಪ್ರೀತಿಯನ್ನು ಭುವಿ ಒಪ್ಪಿಕೊಂಡ ಮೇಲೆ ಧಾರಾವಾಹಿ ಕಥೆಯಲ್ಲಿ ಹೊಸ ತಿರುವು ಪಡೆದುಕೊಂಡಿದೆ.. ಪ್ರೇಕ್ಷಕರು ಕೂಡ ಸಾಕಷ್ಟು ದಿನಗಳಿಂದ ಇದನ್ನೇ ನಿರೀಕ್ಷೆ ಮಾಡಿದ್ದರು… ಅದರಂತೆ ನಿರ್ದೇಶಕರು ಕೂಡ ಪ್ರೇಕ್ಷಕರ ಮೆಚ್ಚುಗೆ ಆಗುವಂತೆ ಕಥೆ ಹೆಣೆದಿದ್ದಾರೆ.. ಆದರೆ ನಿನ್ನೆಯ ಎಪಿಸೋಡ್ ನಲ್ಲಿ ಭುವಿ ಕಾಣಿಸಿಕೊಳ್ಳದೇ ಇರುವುದಕ್ಕೆ ಪ್ರೇಕ್ಷಕರಿಗೆ ಆತಂಕ ಮೂಡಿದೆ ..ಯಾಕಂದ್ರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಸಾಕಷ್ಟು ಧಾರಾವಾಹಿಗಳಲ್ಲಿ ಪಾತ್ರ ವರ್ಗ ಬದಲಾಗುತ್ತಿದೆ.. ಕೆಲವು ಧಾರಾವಾಹಿಗಳು ಅರ್ಧಕ್ಕೆ ನಿಂತು ಹೋಗುತ್ತಿವೆ…ಆದ್ದರಿಂದ ಪ್ರೇಕ್ಷಕರು ಕನ್ನಡತಿ ಧಾರಾವಾಹಿಯಲ್ಲಿ ಏನಾದರೂ ಬದಲಾವಣೆ ಆಗಿದೆಯೇ ಎಂಬ ಆತಂಕದಲ್ಲಿದ್ದಾರೆ.. ಆದರೆ ಅಸಲಿಗೆ ಭುವಿ ಪಾತ್ರಧಾರಿ ರಂಜಿನಿ ರಾಘವನ್ ಅವರು ಕೋವಿಡ್ ಸೋಂಕು ಉಂಟಾಗಿದೆ…ಆದ್ದರಿಂದ ಧಾರಾವಾಹಿ ಚಿತ್ರೀಕರಣದಲ್ಲಿ ರಂಜಿನಿ ಭಾಗವಹಿಸುತ್ತಿಲ್ಲ….

ರಂಜಿನಿ ಆದಷ್ಟು ಬೇಗ ಕೋವಿಡ್ ಸೋಂಕಿನಿಂದ ಬೇಗ ಚೇತರಿಸಿಕೊಳ್ಳಿ ಎಂದು ಧಾರಾವಾಹಿಯ ನಾಯಕ ನಟ ಕಿರಣ್ ರಾಜ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ರಂಜನಿ ಅವರಿಗೆ ಶುಭ ಹಾರೈಸಿದ್ದಾರೆ… ಇದನ್ನ ನೋಡಿದ ನಂತರ ಕನ್ನಡತಿಯ ಅಭಿಮಾನಿಗಳು ನಿಟ್ಟುಸಿರುಬಿಟ್ಟಿದ್ದಾರೆ… ಒಟ್ಟಾರೆ ಇನ್ನೂ 1ವಾರಗಳ ಕಾಲ ಭುವಿ ಅವರನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳಲೇ ಬೇಕು

Leave a Reply

Your email address will not be published. Required fields are marked *