- January 28, 2022
ಅತಿ ಹೆಚ್ಚು ಸಂಭಾವನೆ ಪಡೆಯುವವರ ಪಟ್ಟಿಯಲ್ಲಿ ಅಲ್ಲು ಅರ್ಜುನ್

ನಟ ಅಲ್ಲು ಅರ್ಜುನ್ ಅಲಾ ವೈಕುಂಠಪುರಮಲೋ ಹಾಗೂ ಪುಷ್ಪ ಸಿನಿಮಾದ ನಂತರ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ…ಪುಷ್ಪ ಸಿನಿಮಾಗಾಗಿ ಅಲ್ಲು ಅರ್ಜುನ್ ಮೂವತ್ತು ಕೋಟಿ ಸಂಭಾವನೆಯನ್ನು ಹೊಂದಿದ್ದರು ..ಸಿನಿಮಾ ಹಿಟ್ ಆಗಿದ್ದೇ ಆಗಿದ್ದು ಈಗ ತಮ್ಮ ಸಂಭಾವನೆಯನ್ನ ನೂರು ಕೋಟಿಗೆ ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿದೆ…ಅದರಂತೆಯೇ ಮುಂದಿನಚಿತ್ರಕ್ಕೆ 100ಕೋಟಿ ಸಂಭಾವನೆ ಪಡೆದಿದ್ದಸರೆ ಅಲ್ಲು…

ಟಾಲಿವುಡ್ ಅಂಗಳದಲ್ಲಿ ಈಗಾಗಲೇ ನಟ ಪ್ರಭಾಸ್ ಕೂಡ ನೂರು ಕೋಟಿ ಸಂಭಾವನೆ ಪಡೆದಿದ್ದು..
ಅತಿ ಹೆಚ್ಚು ಸಂಭಾವನೆ ಪಡೆಯುವವರ ಪಟ್ಟಿಯಲ್ಲಿ ಮೊದಲ ಹೆಸರು ಪ್ರಭಾಸ್ ಹೆಸರಿದ್ದು ಈಗ ಅಲ್ಲು ಅರ್ಜುನ್ ಕೂಡ ನೂರು ಕೋಟಿ ಸಂಭಾವನೆ ಪಡೆಯುವ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆಯುವವರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ…

ಸದ್ಯ ಅಲ್ಲು ಅರ್ಜುನ್ ಗೆ 100 ಕೋಟಿ ಸಂಭಾವನೆ ಕೊಟ್ಟು ಸಿನಿಮಾ ನಿರ್ಮಾಣ ಮಾಡುತ್ತಿರುವ ಮತ್ಯಾವುದೂ ಅಲ್ಲ ಲೈಕಾ ಸಿನಿಮಾ ನಿರ್ಮಾಣ ಸಂಸ್ಥೆ .ಈ ಸಿನಿಮಾವನ್ನ ಕಾಲಿವುಡ್ ನ ಸ್ಟಾರ್ ಡೈರೆಕ್ಟರ್ ಅಟ್ಲಿ ನಿರ್ದೇಶನ ಮಾಡುತ್ತಿದ್ದಾರೆ ..ಇನ್ನು ಅಲ್ಲು ಅರ್ಜುನ್ ಅಭಿನಯದ ಪುಷ್ಪ೨ ಸಿನಿಮಾ ಕೂಡ ಕೊನೆಯ ಹಂತದ ಚಿತ್ರೀಕರಣ ಮುಗಿಸಬೇಕಿದೆ ಅದಾದ ನಂತರವಷ್ಟೇ ಅಲ್ಲು ಅರ್ಜುನ್ ಮತ್ತೊಂದು ಸಿನಿಮಾದಲ್ಲಿ ಬ್ಯುಸಿ ಆಗಲಿದ್ದಾರೆ

