• December 19, 2021

ಸಖತ್ ಎಷ್ಟು ಸಖತ್ತಾಗಿದೆ ಗೊತ್ತಾ??

ಸಖತ್ ಎಷ್ಟು ಸಖತ್ತಾಗಿದೆ ಗೊತ್ತಾ??

ಸಿನಿಮಾ- ಸಖತ್
ನಟನೆ- ಗಣೇಶ್. ನಿಶ್ವಿಕಾ ನಾಯ್ಡು, ಸಾಧು ಕೋಕಿಲ
ನಿರ್ದೇಶಕ- ಸಿಂಪಲ್ ಸುನಿ

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿಶ್ವಿಕಾ ನಾಯ್ಡು ಅಭಿನಯದ ಸಖತ್ ಸಿನಿಮಾ ಬಿಡುಗಡೆ ಆಗಿ ಬಿಗ್ ಓಪನಿಂಗ್ ಪಡೆದುಕೊಂಡಿದೆ..ಚಮಕ್ ನಂತ್ರ ಮತ್ತೆ ಗಣಿ- ಸುನಿ ಸ್ಯಾಂಡಲ್ ವುಡ್ ಗೆ ಸಖತ್ ಎಂಟ್ರಿ ಕೊಟ್ಟಿದ್ದಾರೆ…ಗಣೇಶ್ ಸಿನಿಮಾ ಅಂದ ತಕ್ಷಣ ಕಾಮಿಡಿ ಎಂಟರ್ಟೇನ್ಮೆಂಟ್ ಹಾಗೂ ರೊಮ್ಯಾಂಟಿಕ್ ಸೀನ್ ಗಳನ್ನ ಎಕ್ಸ್ಪೆಕ್ಟ್ ಮಾಡಬಹುದು.ಮಾದರಂತೆಯೇ ಸಖತ್ ಚಿತ್ರದಲ್ಲಿಯೂ ಈ ಎಲ್ಲಾ ಎಲಿಮೆಂಟ್ಸ್ ಗಳು ನೋಡ ಸಿಗುತ್ತೆ…

ಬಾಲ್ಯದಿಂದಲೂ ಎಸ್‌ಪಿ ಬಾಲಸುಬ್ರಮಣ್ಯಂ ಅವರಂತೆ ಗಾಯಕನಾಗಬೇಕೆಂಬ ಹಂಬಲ ಹೊಂದಿರುವ ಬಾಲು (ಗಣೇಶ್) ಸುತ್ತ ಇಡೀ ಕಥೆ ಸುತ್ತುತ್ತದೆ. ದುರದೃಷ್ಟವಶಾತ್, ನಾಯಕ ಸಣ್ಣ ವಯಸ್ಸಿನಲ್ಲೇ ತನ್ನ ಹೆತ್ತವರನ್ನು ಕಳೆದುಕೊಳ್ಳುತ್ತಾನೆ…ಆನಂತ್ರ ಸಾಧು (ಸಾಧು ಕೋಕಿಲಾ) ನಡೆಸುವ ಆರ್ಕೆಸ್ಟ್ರಾದಲ್ಲಿ ಬೆಳೆಯುತ್ತಾನೆ. ಆಂಕರ್ ಮಯೂರಿ (ಸುರಭಿ) ಜೊತೆ‌ ಒಂದಿಷ್ಟು ರೊಮ್ಯಾಂಟಿಕ್‌ ಸೀನ್‌ಗಳಿದ್ದು ಪ್ರೇಕ್ಷಕರಿಗೆ ಇಬ್ಬರ ಕೆಮಿಸ್ಟ್ರಿ ತೆರೆ ಮೇಲೆ ನೋಡಲು ಖುಷಿ ಕೊಡುತ್ತೆ..

ಒಂದು ಅಪಘಾತಕ್ಕೆ ಬಾಲು ಸಾಕ್ಷಿಯಾಗುವುದು ಕಥೆಗೆ ಬೇರೆಯದ್ದೆ ತಿರುವು ನೀಡುತ್ತೆ…
ಬಾಲು ದೃಷ್ಟಿ ಶಾಲೆಗೆ, ಅಂಧರ ಶಾಲೆಯನ್ನು ಪ್ರವೇಶಿಸಿ, ಹಾಡುವ ಶಿಕ್ಷಕರಾಗಿ ಸೇರಿದಾಗ ಕಥೆಗೆ ಮತ್ತಷ್ಟು ಪ್ರಾಮುಖ್ಯತೆ ಸಿಗುತ್ತೆ… ಮಕ್ಕಳು ಮತ್ತು ಅಂಧ ಶಿಕ್ಷಕಿ (ನಿಶ್ವಿಕಾ) ದೃಷ್ಟಿಹೀನರ ಬಗ್ಗೆ ಬಾಲು ಅವರ ದೃಷ್ಟಿಕೋನವನ್ನು ಹೇಗೆ ಬದಲಾಯಿಸುತ್ತಾರೆ ಮತ್ತು ಅಪರಾಧವು ಹೇಗೆ ತಿರುವುಗಳು ಪಡೆದುಕೊಳ್ಳುತ್ತೆ ಅನ್ನೋದೆ ಸಿನಿಮಾದ ಮುಖ್ಯಭಾಗ

ಗಣೇಶ್ ಎಂದಿನಂತೆ ಸಖತ್ ಆಕ್ಟಿಂಗ್ ಮಾಡಿದ್ದಾರೆ…ಇನ್ಮು‌ ನಿಶ್ವಿಕಾ ಕೂಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ‌‌..ಸಿನಿಮಾದಲ್ಲಿ ಕೆಲವು ರಿಪಿಟೆಡ್ ಸೀನ್ ಗಳನ್ನು ಹೊರತುಪಡಿಸಿದ್ರೆ.. ಚಿತ್ರವು ಸೆಕೆಂಡ್ ಹಾಫ್ ಹೆಚ್ಚು ಇಂಪ್ರೆಸಿವ್ ಆಗಿದೆ…ಇನ್ನು‌ ಸುನಿ ಕೂಡ ತಮ್ಮ ಕೆಲಸವನ್ನ ಎಂದಿನಂತೆ ಅಚ್ಚುಕಟ್ಟಾಗಿ ಮಾಡಿದ್ದಾರೆ….

Leave a Reply

Your email address will not be published. Required fields are marked *