- December 19, 2021
ಬದಲಾವಣೆಯ ಭಾಗವಾಗಿ ಬಂದ ಆನ

ಸಿನಿಮಾ- ಆನ
ನಟನೆ- ಅಧಿತಿ ಪ್ರಭುದೇವ,ಸುನೀಲ್ ಪುರಾಣಿಕ್ ಮುಂತಾದವರು
ನಿರ್ದೇಶಕ- ಮನೋಜ್ ಪಿ ನಡುಲಮನೆ
ಬಿಡುಗಡೆಯ ಮುಂಚೆಯೇ ಫಸ್ಟ್ ಲುಕ್ ಹಾಗೂ ಮೇಕಿಂಗ್ ನಿಂದ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಸಿನಿಮಾ ಆನಾ…ನಟಿ ಅಧಿತಿ ಅಭಿನಯದ ಮೊದಲ ಕ್ರೈಂ ಥ್ರಿಲ್ಲರ್ ಚಿತ್ರ ಇದಾಗಿದ್ದು ನಿರ್ದೇಶಕ ಮನೋಜ್ ಕೂಡ ತಮ್ಮ ಕೆಲಸದಿಂದ ಭರವಸೆ ಮೂಡಿಸಿದ್ರು…

ಲಾಕ್ ಡೌನ್ ಕಾರಣದಿಂದ ಇಡೀ ದೇಶವೇ ಲಾಕ್ ಆಗಿದ್ದ ಇಂತಹ ಸಂದರ್ಭದಲ್ಲಿ ಕೆಲಸ ಕಳಕೊಂಡ ನಾಲ್ವರು ದರೋಡೆಗೆ ಇಳಿಯುತ್ತಾರೆ…ಇನ್ನೆಷ್ಟು ದಿನ ಹೀಗೆ ಬದುಕುವುದು ಅಂತ ಒಬ್ಬ ಗಣಿ ಧಣಿಯ ಮಗಳನ್ನು ಕಿಡ್ನಾಪ್ ಮಾಡಿ ಹತ್ತು ಕೋಟಿಗೆ ಬೆಡಿಕೆ ಇಡುತ್ತಾರೆ…

ಅವರಿಂದ ಬರುವ ಹಣ ಹಂಚಿಕೊಂಡು ನೆಮ್ಮದಿಯಾಗಿರಬಹುದು ಎಂದು ಮಾಸ್ಟರ್ ಪ್ಲಾನ್ ಮಾಡಿ ಆ ಹುಡುಗಿಯನ್ನು ಕಿಡ್ನಾಪ್ ಮಾಡುತ್ತಾರೆ… ಕಿಡ್ನಾಪ್ ಮಾಡಿದ ನಂತರ ನಿಗೂಢ ಸ್ಥಳದಲ್ಲಿ ಅವಳನ್ನು ಬಚ್ಚಿಡುತ್ತಾರೆ… ನಂತರ 4 ಜನಕ್ಕೆ ಆಗುವ ವಿಚಿತ್ರ ಅನುಭವಗಳು ಹಾಗೂ ಕಿಡ್ನಾಪ್ ಆದ ಯುವತಿ ಯಾರು ಅನ್ನೋದರ ಮೇಲೆ ಸಿನಿಮಾದ ಕಥೆ ಎಳೆ ಬಿಚ್ಚಿಕೊಳ್ಳುತ್ತದೆ…

ಆನ ಕನ್ನಡದ ಮೊದಲ ಸೂಪರ್ ಹೀರೊ ಚಿತ್ರ ಎಂದೇ ಆರಂಭದಿಂದಲೇ ಚಿತ್ರತಂಡ ಪ್ರಚಾರ ಮಾಡಿದರು.. ಆದರೆ ಕಥೆ ಕೇಳಿದರೆ ಹಾರಾರ್ ಶೈಲಿಯಲ್ಲಿದ್ದು ..ಇದು ಸೂಪರ್ ಹೀರೋ ಚಿತ್ರವೂ ಅಥವಾ ಕ್ರೈಂ ಥ್ರಿಲ್ಲರ್ ಸಿನಿಮಾವೂ ಎಂಬುದು ಪ್ರೇಕ್ಷಕರಿಗೆ ಕಾಡುವ ಪ್ರಶ್ನೆ.. ಆದರೆ ಸಿನಿಮಾದಲ್ಲಿ 2ಅಂಶಗಳಿದ್ದು ಅದರ ಜತೆಗೆ ಮಾಟ ಮಂತ್ರ ಮತ್ತು ಮೂವತ್ತರ ದಶಕದ ಫ್ಲ್ಯಾಶ್ ಕೂಡ ಇದೆ…

ಸಿನಿಮಾದ ಫಸ್ಟ್ ಹಾಫ್ ಸಕತ್ ಫಾಸ್ಟಾಗಿ ನೋಡಿಸಿಕೊಂಡು ಹೋಗುವ ನಂತರದ ಸೆಕೆಂಡ್ ಹಾಫ್ ಸ್ವಲ್ಪ ಲ್ಯಾಗಾಯ್ತು ಅನ್ನುವುದು ಪ್ರೇಕ್ಷಕರ ಅಭಿಪ್ರಾಯ…


ಅದಿತಿಗೆ ಇದು ಮೊದಲ ಸೂಪರ್ ಹೀರೋ ಚಿತ್ರವಾಗಿದ್ದು ತನ್ನ ಅಭಿನಯದ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ… ಸಿನಿಮಾ ಮುಗಿಯುವ ಹೊತ್ತಿಗೆ ಇದೊಂದು ಪ್ರೀಕ್ವೆಲ್ ಮುಂದೆ ಆನ2 ಕೂಡ ಬರುವ ಸಾಧ್ಯತೆ ಇದೆ.. ಎನ್ನುವ ಸುಳಿವು ಕೂಡ ಚಿತ್ರತಂಡ ನೀಡಿದೆ…