- January 7, 2022
ಹ್ಯಾಟ್ರಿಕ್ ಬಾರಿಸಲು ಸಿದ್ದನಾದ ಶೋಕ್ದಾರ್

ಸ್ಯಾಂಡಲ್‌ವುಡ್ ಶೋಕ್ದಾರ್ ಧನ್ವೀರ್ ಗೌಡ ಅಭಿನಯದ ಮೂರನೇ ಸಿನಿಮಾ ಸೆಟ್ಟೇರಲು ಸಜ್ಜಾಗಿದೆ… ಬಜಾರ್ ಸಿನಿಮಾ ಮೂಲಕ ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆಗಿಳಿದ ಧ್ವನೀರ್, ಮೊದಲ ಸಿನಿಮಾದಲ್ಲಿಯೇ ಸಕ್ಸಸ್ ಗಳಿಸಿದ್ರು… ಸದ್ಯ ಬೈ ಟು ಲವ್ ಸಿನಿಮಾಕಂಪ್ಲೀಟ್ ಮಾಡಿರೋ ಧನ್ವೀರ್ ಈ ತಮ್ಮ ಮೂರನೇ ಚಿತ್ರಕ್ಕೆ ಸಜ್ಜಾಗಿದ್ದಾರೆ…

ಕನ್ನಡ ಹಾಗೂ ತೆಲುಗು ಚಿತ್ರಗಳಿಗೆ ಸ್ಕ್ರಿಪ್ಟ್ ರೈಟರ್ ಆಗಿರುವ ಶಂಕರ್ ರಾಮನ್ ಧನ್ವೀರ್ ಚಿತ್ರದ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಇದೊಂದು ಆಕ್ಷನ್ ಎಂಟರ್ ಟ್ರೈನರ್ ಕಥೆ ಹೊಂದಿರೋ ಸಿನಿಮಾ ಆಗಲಿದೆ…

ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈನ್ಮೆಂಟ್ಸ್ ಪ್ರೊಡಕ್ಷನ್ ಧನ್ವೀರ್ ಮೂರನೇ ಸಿನಿಮಾಗೆ ಬಂದವಾಳ ಹಾಕಲು ಸಜ್ಜಾಗಿದ್ದು ಸದ್ಯದಲ್ಲಿಯೇ ಈ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಅನಾವರಣಗೊಳ್ಳಲಿದೆ.
