- January 29, 2022
ಪ್ರಪೋಸ್ ಮಾಡಿಯೇ ಬಿಟ್ಟರು ನೋಡಿ ಡಾಲಿ.. ನಾಚಿ ನೀರಾದ ಅಮೃತಾ

ನಟಿ ಡಾಲಿ ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ …ಹೌದು ಧನಂಜಯ್ ಅಭಿನಯದ ಬಡವರ ರಾಸ್ಕಲ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಅಮೃತ….ಡಾಲಿ ರಿಯಲ್ ಲೈಫ್ ಗೆ ನಾಯಕಿಯಾಗ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ …

ಇತ್ತೀಚಿಗಷ್ಟೆ ಜೀ ವಾಹಿನಿಯ ರಿಯಾಲಿಟಿ ಶೋವೊಂದರಲ್ಲಿ ಅಮೃತ ಹಾಗೂ ಡಾಲಿ ಇಬ್ಬರು ಭಾಗಿಯಾಗಿದ್ದರು… ಇದೇ ಸಂದರ್ಭದಲ್ಲಿ ಧನಂಜಯ ಕೆಂಪು ಗುಲಾಬಿ ಹಿಡಿದು ಅಯ್ಯಂಗಾರ್ ಅವರಿಗೆ ಪ್ರಪೋಸ್ ಮಾಡಿದ್ದಾರೆ ..ಅದಕ್ಕಾಗಿ ಕವನ ಹೇಳಿ ಮಂಡಿಯುರಿ ಪ್ರಪೋಸ್ ಮಾಡಿ ಕೆಂಪು ಗುಲಾಬಿಗಳನ್ನು ಅಮೃತ ಕಾಲಿನಡಿಯಲ್ಲಿ ಇರಿಸಿದ್ದಾರೆ… ಇದನ್ನು ಕಂಡ ಅಭಿಮಾನಿಗಳು ಒಳ್ಳೆಯ ಜೋಡಿ ಎಂದು ಕಮೆಂಟ್ ಮಾಡಿದ್ದಾರೆ…

ಇದು ಇಷ್ಟಕ್ಕೆ ಮುಗಿದಿಲ್ಲ ಧನಂಜಯ ಮಾಡಿದ ಪ್ರಪೋಸಲ್ ಅಮೃತಾ ಅಯ್ಯಂಗಾರ್ ಬಡವ ರಾಸ್ಕಲ್ ಚಿತ್ರದ ಹಾಡಿನ ಮೂಲಕ ಪ್ರತ್ಯುತ್ತರ ನೀಡಿದ್ದಾರೆ…. ಒಟ್ಟಾರೆ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು ಕೆಲವರು ಡಾಲಿಗೆ ಇಬ್ಬರು ಒಳ್ಳೆ ಜೋಡಿ ಅಂತಿದ್ರೆ… ಇನ್ನೂ ಕೆಲವರು ಡಾಲಿ ಖದರ್‌ಗೆ ಈ ಹುಡುಗಿ ಅಲ್ಲ ಅಂತಿದ್ದಾರೆ…

ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಸಮಯದಿಂದಲೂ ಧನಂಜಯ ಹಾಗೂ ಅಮೃತ ಇಬ್ಬರೂ ಕೂಡ ಡೇಟ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಜೋರಾಗಿ ಹರಡಿತ್ತು .. ಸದ್ಯ ಆ ಗಾಸಿಪ್ ಸುದ್ದಿಗೆ ಈ ವಿಡಿಯೋ ಪುಷ್ಟಿ ನೀಡುತ್ತಿದೆ…
