- January 29, 2022
ಮಾಜಿ ಸಿಎಂ ಯಡಿಯೂರಪ್ಪಗೆ ಮೊಮ್ಮಗಳ ವಿಯೋಗ…

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮೊಮ್ಮಗಳ ಡಾಕ್ಟರ್ ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ…ಬಿಎಸ್ ವೈ ಪುತ್ರಿ ಪದ್ಮಾವತಿಯ ಮಗಳಾಗಿರೋಸೌಂದರ್ಯ ವೃತ್ತಿಯಲ್ಲಿ ವೈದ್ಯರಾಗಿದ್ದರು…ನಿನ್ನೆ ಬೆಳಗ್ಗೆ ಹತ್ತು ಗಂಟೆಯಲ್ಲಿ ಈ ಘಟನೆ ನಡೆದಿದ್ದು..ಮೌಂಟ್ ಕಾರ್ಮೆಲ್ ಕಾಲೇಜು ಫ್ಲ್ಯಾಟ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಸೌಂದರ್ಯ …ಸೌಂದರ್ಯ ಮೂರು ವರ್ಷ ಹಿಂದೆ ಡಾಕ್ಟರ್ ನೀರಜ್ ಜೊತೆ ಮದುವೆಯಾಗಿದ್ದರು… ಸೌಂದರ್ಯ ಬೋರಿಂಗ್ ಆಸ್ಪತ್ರೆಯಲ್ಲಿ ರೆಡಿಯೋಲಾಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು..ಇನ್ನು ನಿರಜ್ ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು…

ಸೌಂದರ್ಯ ಅವ್ರಿಗೆ 9ತಿಂಗಳ ಮಗುವಿದ್ದು ಬಾಣಂತಿಯ ಸನ್ನಿ ಖಾಯಿಲೆಯಿಂದ ಸೌಂದರ್ಯ ಬಳಲುತ್ತಿದ್ದರಂತೆ…ಅದರ ಜೊತೆಯಲ್ಲಿ ತಲೆ ನೋವು ಹೀಗೂ ಕಣ್ಣಿನ ಸಮಸ್ಯೆ ಅವ್ರನ್ನ ಎಲ್ಲಿಲ್ಲದಂತೆ ಕಾಡುತ್ತಿತ್ತು ಎಂದು ತಿಳಿದುಬಂದಿದೆ…
