- January 28, 2022
ಸಮಂತಾ-ನಾಗಚೈತನ್ಯ ಡಿವೋರ್ಸ್ ವಿಚಾರಕ್ಕೆ ಹೊಸ ಟ್ವಿಸ್ಟ್

ಇತ್ತೀಚಿನ ದಿನಗಳಲ್ಲಿ ಸಿನಿಮಾರಂಗದಲ್ಲಿ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನದ ವಿಚಾರ ಸಾಕಷ್ಟು ಚರ್ಚೆಯಾಗಿತ್ತು… ಸಮಂತಾ ಹಾಗೂ ನಾಗಚೈತನ್ಯ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಯೋಚನೆ ಮಾಡಿ ಈ ಬಗ್ಗೆ ಮಾತನಾಡಿದ್ದರು.

ಇನ್ನೂ ಒಂದಷ್ಟು ಜನ ಇವರಿಬ್ಬರ ಡಿವೋರ್ಸ್ ವಿಚಾರವನ್ನು ಕೇಳಿ ಆಶ್ಚರ್ಯ ಪಟ್ಟಿದ್ದರು…ಅದಷ್ಟೇ ಅಲ್ಲದೆ ಇವರಿಬ್ಬರು ಬೇರೆ ಆಗಬಾರದು ಎಂದು ಕೂಡ ಮನವಿ ಮಾಡಿದ್ದರು ..ಕೆಲವು ದಿನಗಳ ಹಿಂದೆ ಮಾಧ್ಯಮಗಳ ಮುಂದೆ ನಾಗಚೈತನ್ಯ ವಿಚ್ಛೇದನದ ವಿಚಾರವಾಗಿ ಮಾತನಾಡಿದ್ದರು… ಅದರ ಬೆನ್ನಲ್ಲೇ ಈಗ ನಾಗಚೈತನ್ಯ ಅವರ ತಂದೆ ನಾಗಾರ್ಜುನ ಡಿವೋರ್ಸ್ ವಿಚಾರವಾಗಿ ಹೇಳಿಕೆ ಕೊಟ್ಟಿದ್ದಾರೆ …
ಖಾಸಗಿ ಮ್ಯಾಗ್ಸೀನ್ ಗೆ ಕೊಟ್ಟಿರುವ ಸಂದರ್ಶನವೊಂದರಲ್ಲಿ ನಾಗಚೈತನ್ಯ ಮಗನ ವಿಚ್ಛೇದನದ ಬಗ್ಗೆ ಮೌನ ಮುರಿದಿದ್ದಾರೆ ..ಈ ಸಂದರ್ಶನದಲ್ಲಿ ಶಾಕಿಂಗ್ ವಿಚಾರವೊಂದನ್ನು ನಾಗರ್ಜುನ ಬಿಟ್ಟುಕೊಟ್ಟಿದ್ದಾರೆ… ಹೌದು ಡಿವೋರ್ಸ್ ಕೇಳಿದ್ದು ಸಮಂತಾ ನಾಗಚೈತನ್ಯ ಅಲ್ಲ ಎಂದು ಹೇಳಿಕೆ ನೀಡಿದ್ದಾರೆ …

2021ನಂತರ ಅವರ ವಿವಾಹ ಜೀವನದಲ್ಲಿ ಮೊದಲ ಇದ್ದಷ್ಟು ಸಾಮರಸ್ಯ ಇರಲಿಲ್ಲ…2021 ನಂತರ ಅವರು ದಾಂಪತ್ಯ ಜೀವನದಲ್ಲಿ ಸಮಸ್ಯೆ ಪ್ರಾರಂಭವಾದವು ಮೊದಲ ಸಮಂತ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು.. ಇದನ್ನು ನಾಗಚೈತನ್ಯ ಒಪ್ಪಿಕೊಂಡಿದ್ದರು ಎಂದು ನಾಗಾರ್ಜುನ ಹೇಳಿಕೆ ಕೊಟ್ಟಿದ್ದಾರೆ

ಸದ್ಯ ಸಮಂತಾ ತಮ್ಮ ಡಿವೋರ್ಸ್ ಬಗ್ಗೆ ಕೊಟ್ಟಿದ್ದ ಹೇಳಿಕೆಯ ಪೋಸ್ಟನ್ನು ಸೋಷಿಯಲ್ ಮೀಡಿಯಾದಿಂದ ಡಿಲೀಟ್ ಮಾಡಿದ್ದಾರೆ… ಅಕ್ಟೋಬರ್ ತಿಂಗಳಲ್ಲಿ ಸಮಂತಾ ನಾಗ ಚೈತನ್ಯ ಅವರಿಂದ ವಿಚ್ಚೇದನ ಪಡೆದಿದ್ದರು ಸದ್ಯ ಈಗ ಸಮಂತಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ