• March 3, 2022

ಕುಸ್ತಿ ಗರಡಿಯ ಅಖಾಡಕ್ಕಿಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಕುಸ್ತಿ ಗರಡಿಯ ಅಖಾಡಕ್ಕಿಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ನಿರ್ದೇಶಕ ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳುತ್ತಿರುವ ಗರಡಿ ಸಿನಿಮಾದ ಚಿತ್ರೀಕರಣ ನಿನ್ನೆಯಿಂದ ಶುರುವಾಗಿದೆ… ಸಿನಿಮಾದಲ್ಲಿ ಯಶಸ್ ಸೂರ್ಯ ನಾಯಕನಾಗಿ ಅಭಿನಯ ಮಾಡುತ್ತಿದ್ದು ಚಿತ್ರದ ಪ್ರಮುಖ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ ..

ಇನ್ನು ಸಿನಿಮಾವನ್ನ ಬಿಸಿ ಪಾಟೀಲ್ ನಿರ್ಮಾಣ ಮಾಡುವುದರ ಜೊತೆಗೆ ಚಿತ್ರದಲ್ಲಿ ಒಂದು ಪಾತ್ರವನ್ನು ಕೂಡ ನಿರ್ವಹಿಸುತ್ತಿದ್ದಾರೆ… ನಿನ್ನೆಯಿಂದ ಚಿತ್ರೀಕರಣ ಶುರುವಾಗಿದ್ದು ಸಿನಿಮಾದ ಸೆಟ್ ಗೆ ನಟ ದರ್ಶನ್ ಭೇಟಿ ಕೊಟ್ಟಿದ್ದಾರೆ… ಮೊದಲ ದಿನದ ಚಿತ್ರೀಕರಣವನ್ನ ಕೆಲವು ಗಂಟೆಗಳ ಕಾಲ ಕೂತು ವೀಕ್ಷಣೆ ಮಾಡಿದ ದರ್ಶನ್ ಇಡೀ ಚಿತ್ರ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದಾರೆ ..

ಇನ್ನು ಈ ಸಿನಿಮಾದಲ್ಲಿ ಈ ಹಿಂದೆಯೇ ನಟಿ ರಚಿತಾ ರಾಮ್ ನಾಯಕಿಯಾಗಿ ಅಭಿನಯ ಮಾಡಬೇಕಾಗಿತ್ತು… ಆದರೆ ಡೇಟ್ಸ್ ಸಮಸ್ಯೆ ಆದ ಕಾರಣದಿಂದ ಈಗ ಸೋನಲ್ ಮಂಥೆರೋ ಚಿತ್ರದ ನಾಯಕಿಯಾಗಿ ಅಭಿನಯ ಮಾಡುತ್ತಿದ್ದಾರೆ… ಈಗಾಗಲೇ ಸಿನಿಮಾ ಶೂಟಿಂಗ್ ಶುರುವಾಗುವ ಮುನ್ನವೇ ನಟ ಯಶಸ್ ಸೂರ್ಯ ಸಾಕಷ್ಟು ತಯಾರಿಯನ್ನು ಮಾಡಿಕೊಂಡು ಚಿತ್ರೀಕರಣದ ಅಂಗಳಕ್ಕೆ ಕಾಲಿಟ್ಟಿದ್ದಾರೆ.. ಒಟ್ಟಾರೆ ಗರಡಿ ಬಿಗ್ ಬಜೆಟ್ ಸಿನೆಮಾ ಆಗಲಿದ್ದು ಯೋಗರಾಜ್ ಭಟ್ ನಿರ್ದೇಶನ ದರ್ಶನ್ ಗೆಸ್ಟ್ ಅಪೀರಿಯನ್ಸ್ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ…

Leave a Reply

Your email address will not be published. Required fields are marked *