• March 3, 2022

ರಾಜಕೀಯ ಸಮಾವೇಶವಾಯಿತಾ? ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ರಾಜಕೀಯ ಸಮಾವೇಶವಾಯಿತಾ? ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಇಂದಿನಿಂದ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಲಿದೆ…ಈ ಚಿತ್ರೋತ್ಸವದಲ್ಲಿ ಸಾಕಷ್ಟು ಸಿನಿಮಾಗಳು ಪ್ರದರ್ಶನವಾಗುವುದರ ಜೊತೆಗೆ ಪ್ರಶಸ್ತಿಯನ್ನು ಪಡೆದುಕೊಳ್ಳಲಿದ್ದಾರೆ …ಸಿನಿಮಾ ಕಲಾವಿದರು ಹಾಗೂ ಪ್ರೇಕ್ಷಕರು ದೇಶ ವಿದೇಶದ ಸಿನಿಮಾಗಳನ್ನ ಚಿತೋತ್ಸವದಲ್ಲಿ ನೋಡಲು ಕಾತುರದಿಂದ ಕಾಯುತ್ತಿದ್ದಾರೆ… ಆದರೆ ಈ ವರ್ಷದ ಚಿತ್ರೋತ್ಸವ ರಾಜಕೀಯ ಸಮಾವೇಶವಾಗಿದೆ ಟೀಕೆಗಳು ಈಗಾಗಲೇ ಶುರುವಾಗಿದೆ ..

ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ ರಾಜ ಕೀಯ ಸನ್ನಿವೇಶವಾಗಿದೆ ಎಂಬ ಟೀಕೆ ಕೇಳಿ ಬರುತ್ತಿರುವುದಕ್ಕೆ ಕಾರಣವೂ ಇದೆ…ಹೌದು ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಸಿನಿಮಾರಂಗದಿಂದ ನಾಲ್ಕು ಕಲಾವಿದರನ್ನ ಬಿಟ್ಟರೆ ಮಿಕ್ಕೆಲ್ಲಾ ರಾಜಕೀಯ ಗಣ್ಯರು ಆಗಿದ್ದಾರೆ ..

ವಿಶೇಷ ಆಹ್ವಾನಿತರು ಹಾಗೂ ಮುಖ್ಯ ಅತಿಥಿಗಳ ಲಿಸ್ಟ್ ನಲ್ಲಿ ಸಿನಿಮಾ ಕಲಾವಿದರ ಹೆಸರು ಕಣ್ಮರೆಯಾಗಿದೆ… ಅದಷ್ಟೇ ಅಲ್ಲದೆ ಇಡೀ ರಾಜಕೀಯ ಗಣ್ಯರು ರನ್ನ ಸಿನಿಮೋತ್ಸವದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ಮಾಡಲಾಗಿದೆ… ಆದರೆ ಚಿತ್ರರಂಗದ ಗಣ್ಯರಿಗೆ ಹಾಗೂ ಹಿರಿಯರಿಗೆ‌ ಅವಕಾಶ ಸಿಕ್ಕಿಲ್ಲ ಎಂಬುದು ಅನೇಕರ ಬೇಸರಕ್ಕೆ ಕಾರಣವಾಗಿದೆ… ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಲಾವಿದರು ಹಾಗೂ ಚಿತ್ರರಂಗದವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ ..

Leave a Reply

Your email address will not be published. Required fields are marked *