• December 14, 2021

ಬಡವ ರಾಸ್ಕಲ್ ನೋಡಿ ಮೆಚ್ಚಿದ ಸಿನಿಮಾ ಪ್ರೇಕ್ಷಕ

ಬಡವ ರಾಸ್ಕಲ್ ನೋಡಿ ಮೆಚ್ಚಿದ ಸಿನಿಮಾ ಪ್ರೇಕ್ಷಕ

ಡಾಲಿ ಧನಂಜಯ ಅಭಿನಯದ “ಬಡವ ರಾಸ್ಕಲ್” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಿರೀಕ್ಷೆಗೂ ಮೀರಿ ಟ್ರೇಲರ್ ಗೆ ಮೆಚ್ಚುಗೆ ವ್ಯಕ್ತವಾಗಿದೆ.‌ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದ್ದು ಎಲ್ಲರ ಗಮನ ಸೆಳೆಯುತ್ತಿದೆ…

ಟ್ರೇಲರ್ ನೋಡಿದ್ರೆ ತಿಳಿಯುತ್ತೆ ಇದೊಂದು ಮಧ್ಯಮ ವರ್ಗದ ಯುವಕನ ಕಥೆ ಅನ್ನೋದು… ಆಗಷ್ಟೇ ವಿದ್ಯಾಭ್ಯಾಸ ಮುಗಿಸಿದ ಯುವಕ ಕೆಲಸಕ್ಕಾಗಿ ಹುಡುಕುವ ಸನ್ನಿವೇಶಗಳೇ ಮುಖ್ಯ ಕಥಾವಸ್ತು. ಅಪ್ಪ-ಅಮ್ಮನ‌ ಜೊತೆ ‌ಮಗನ‌ ಬಾಂಧವ್ಯವನ್ನು ಮನತಟ್ಟುವಂತೆ ನಿರ್ದೇಶಕರು ತೋರಿಸಿದ್ದಾರೆ.

ಕೆ.ಆರ್.ಜಿ‌ ಸ್ಟುಡಿಯೋದವರು ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದು… ಇದೇ 24ರಂದು ಚಿತ್ರ ತೆರೆಗೆ ಬರಲಿದೆ. ಚಿತ್ರಕ್ಕೆ ಶಂಕರ್ ನಿರ್ದೇಶನ‌ ಮಾಡಿದ್ದು ನಟ ಧನಂಜಯ ತಮ್ಮದೇ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣ ಮಾಡಿದ್ದಾರೆ….

ಚಿತ್ರದಲ್ಲಿ ಅಮೃತ ಅಯ್ಯಂಗಾರ್. ರಂಗಾಯಣ ರಘು. ತಾರಾ ಅನ್ನು ಅನೇಕರು ಅಭಿನಯ ಮಾಡಿದ್ದಾರೆ‌…ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಿದ್ದಾರೆ…ಈ ಸಿನಿಮಾ‌‌ ಮೂಲಕ‌ ಧನಂಜಯ ಅವ್ರಿಗೆ ಪಕ್ಕನ ಮನೆ‌ ಹುಡುಗ ಅನ್ನೋ ಚಾರ್ಮ್ ಸಿಗಲಿದೆ..ಈಗಾಗಲೇ ಸಾಕಷ್ಟು ಪಾತ್ರಗಳನ್ನ ನಿರ್ವಹಿಸಿರೋ ಡಾಲಿ ಈ‌ಚಿತ್ರದಲ್ಲಿ ನಾರ್ಮಲ್ ಸಿಂಪಲ್ ಹುಡುಗನಾಗಿ ಮಿಂಚಲಿದ್ದಾರೆ….

Leave a Reply

Your email address will not be published. Required fields are marked *