• February 18, 2022

ಕೈನಲ್ಲಿ ಹೆಚ್ಚು ಸಿನಿಮಾ ಇಲ್ಲವಾದರು ಸಂಭಾವನೆ ಹೆಚ್ಚಿಸಿಕೊಂಡ ಪ್ರಿಯಾಮಣಿ

ಕೈನಲ್ಲಿ ಹೆಚ್ಚು ಸಿನಿಮಾ ಇಲ್ಲವಾದರು ಸಂಭಾವನೆ ಹೆಚ್ಚಿಸಿಕೊಂಡ ಪ್ರಿಯಾಮಣಿ

ಪ್ರಿಯಾಮಣಿ ತನ್ನ ಸಹಜ ಅಭಿನಯದ ಮೂಲಕ ಅಪಾರ ಅಭಿಮಾನಿಗಳ ಮನಸ್ಸು ಮುಟ್ಟಿರುವ ನಟಿ… ಅಭಿನಯದ ಮೂಲಕ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿರುವ ಈ ನಟಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ…ಆದರೂ ಪ್ರಿಯಾಮಣಿ ಸಂಭಾವನೆ ಬಗ್ಗೆ ಇಂಡಸ್ಟ್ರಿ ಯಲ್ಲಿ ಸಖತ್ ಸೌಂಡ್ ಆಗ್ತಿದೆ….

ದಿ ಫ್ಯಾಮಿಲಿ ಮ್ಯಾನ್ ನಂತರ ಪ್ರಿಯಾಮಣಿ ಪ್ಯಾನ್-ಇಂಡಿಯಾ ಪ್ರೇಕ್ಷಕರಲ್ಲಿ ಪರಿಚಿತರಾಗಿದ್ದಾರೆ.‌‌‌..ಫ್ಯಾಮಿಲಿ ಮ್ಯಾನ್ ಸೀಸನ್ ಒನ್ ಹಾಗೂ ಸೀಸನ್ 2ಹಿಟ್ ಆದ ನಂತರ ಪ್ರಿಯಾಮಣಿಗೆ ಭಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ …ಒಟಿಟಿ ನಲ್ಲಿ ಫ್ಯಾಮಿಲಿ ಮ್ಯಾನ್ ಭರ್ಜರಿ ಯಶಸ್ಸು ಕಂಡಿತ್ತು… ಪ್ರೇಕ್ಷಕರ ಗಮನವನ್ನು ಸೆಳೆಯಿತು.. ಅದಷ್ಟೇ ಅಲ್ಲದೆ ಪ್ರಿಯಾಮಣಿ ಅಭಿನಯಕ್ಕೆ ಪ್ರೇಕ್ಷಕರು ಜೈಕಾರ ಹಾಕಿದ್ರು …

ಸಕ್ಸಸ್ ಕೈಹಿಡಿಯುತ್ತಿದ್ದಂತೆ ಪ್ರಿಯಾಮಣಿ ತಮ್ಮ ಸಂಭಾವನೆಯನ್ನ ಹೆಚ್ಚು ಮಾಡಿಕೊಂಡಿದ್ದಾರೆ…ಹೌದು ಪ್ರಿಯಾಮಣಿ ಈಗ ತಮ್ಮ ಹೊಸ ಪ್ರಾಜೆಕ್ಟ್‌ಗಳಿಗಾಗಿ ದಿನಕ್ಕೆ 3-4 ಲಕ್ಷ ರೂಪಾಯಿಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಅವರು ದಿ ಫ್ಯಾಮಿಲಿ ಮ್ಯಾನ್‌ಗಾಗಿ ದಿನಕ್ಕೆ 1.5 ಲಕ್ಷ ರೂ. ಪಡೆದಿದ್ದರಂತೆ…ಸದ್ಯ ಪ್ರಿಯಾಮಣಿ ಅವರ ಕೈಯಲ್ಲಿ ವಿರಾಟ ಪರ್ವಂ, ಮೈದಾನ್ ಮತ್ತು ಹೆಸರಿಸದ ಅಟ್ಲೀ ನಿರ್ದೇಶನದ ಚಿತ್ರಗಳಿವೆ. .ಇದರ ಜೊತೆಯಲ್ಲಿ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಕೂಡ ಪ್ರಿಯಾಮಣಿ ಬ್ಯುಸಿಯಾಗಿದ್ದಾರೆ… ಆದ್ದರಿಂದ ಸದ್ಯ ಪ್ರಿಯಾಮಣಿ ಈಗ ಭಾರಿ ಡಿಮ್ಯಾಂಡ್ ನಲ್ಲಿರುವ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ…

Leave a Reply

Your email address will not be published. Required fields are marked *