- December 1, 2021
ಇನ್ಮುಂದೆ ಅಜಿತ್ ಹೆಸರಿನ ಮುಂದೆ “ತಲಾ” ಎಂದು ಸೇರಿಸುವಂತಿಲ್ಲ !


ಟಾಲಿವುಡ್ ನ ಸೂಪರ್ ಸ್ಟಾರ್ ತಲಾ ಅಜಿತ್ …ಸೂಪರ್ ಸ್ಟಾರ್ ಆಗಿ ಸಾಕಷ್ಟು ಪ್ರಖ್ಯಾತಿ ಹೊಂದಿದ್ದರು ಕೂಡ ಅಜಿತ್ ಇಂದಿಗೂ ಸಖತ್ ಸರಳವಾಗಿ ಲೈಫ್ ಲೀಡ್ ಮಾಡ್ತಾರೆ ..ಅದಷ್ಟೇ ಅಲ್ಲದೆ ಸಾರ್ವಜನಿಕ ಜೀವನದಲ್ಲಿಯೂ ಕೂಡ ಸಖತ್ ಸಿಂಪಲ್ ಆಗಿ ಕಾಣಿಸಿಕೊಳ್ತಾರೆ …ಅಜಿತ್ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದು ಅಭಿಮಾನಿಗಳು ಹಾಗೂ ಸಿನಿಮಾ ರಂಗದವರಿಗೆ ಶಾಕಿಂಗ್ ನ್ಯೂಸ್ ವೊಂದನ್ನ ಕೊಟ್ಟಿದ್ದಾರೆ… ಹೌದು ಇನ್ನು ಮುಂದೆ ತಲಾ ಅಜಿತ್ ಕೇವಲ ಅಜಿತ್ ಆಗಿ ಉಳಿದುಕೊಳ್ಳಲಿದ್ದಾರೆ …

•ನಟ ಅಜಿತ್ ಇವತ್ತು ಪ್ರೆಸ್ ನೋಟ್ ರಿಲೀಸ್ ಮಾಡಿದ್ದು ಅದರಲ್ಲಿ ನನ್ನ ಹೆಸರಿಗೂ ಮುಂಚೆ ಯಾವುದೇ ರೀತಿಯ ಬಿರುದುಗಳನ್ನು ಬಳಸಬಾರದೆಂದು ತಮ್ಮ ಅಭಿಮಾನಿಗಳು ಹಾಗೂ ಸಿನಿಮಾರಂಗದ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ… ಇಷ್ಟು ದಿನಗಳ ಕಾಲ ಅಜಿತ್ ತಲಾ ಹಚ್ಚಿ ತಂದಲ್ಲಿ ಪ್ರಖ್ಯಾತಿ ಹೊಂದಿದ್ದರು ಪ್ರತಿ ಸಿನಿಮಾಗಳಲ್ಲಿಯೂ ಹಾಗೂ ಅವರನ್ನು ಅಭಿಮಾನಿಗಳು ತಲಾ ಎಂದೇ ಕರೆಯುತ್ತಿದ್ದರು… ಆದರೆ ಇನ್ನು ಮುಂದೆ ನನ್ನ ಹೆಸರಿನ ಹಿಂದೆ ಆಗಲಿ ಮುಂದೆ ಆಗಲಿ ಯಾವುದೇ ಬಿರುದು ಬೇಡ ಎಂದು ಅಜಿತ್ ಮನವಿ ಮಾಡಿದ್ದಾರೆ …
ಅಜಿತ್ ಅಭಿಮಾನಿಗಳು ಕೊಟ್ಟ ಬಿರುದನ್ನು ತಮ್ಮ ಹೆಸರಿನ ಜೊತೆ ಏಕೆ ಬಳಸಬಾರದು ಎಂಬುದಕ್ಕೆ ಸ್ಪಷ್ಟ ಕಾರಣ ಇನ್ನೂ ತಿಳಿದುಬಂದಿಲ್ಲ …ಆದರೆ ಮೂಲಗಳ ಪ್ರಕಾರ ಅಜಿತ್ ಸಕತ್ ಸಿಂಪಲ್ ಆಗಿ ಇರಲು ಬಯಸಿದ್ದಾರಂತೆ ಹಾಗಾಗಿ ತಮ್ಮ ಹೆಸರಷ್ಟೇ ಸಾಕು ಅದರ ಮುಂದೆ ಅಗಲಿಕೆಯಿಂದಾಗಿ ಬಿರುದುಗಳು ಬೇಡ ಎಂಬುದು ಅವರ ನಿರ್ಧಾರ ಆಗಿದೆಯಂತೆ …
