• January 25, 2022

ಪವರ್ ಸ್ಟಾರ್ ಗಾಗಿ ಒಂದು ಪವರ್ ಫುಲ್ ನಿರ್ಧಾರ..

ಪವರ್ ಸ್ಟಾರ್ ಗಾಗಿ ಒಂದು ಪವರ್ ಫುಲ್ ನಿರ್ಧಾರ..

ಇಡೀ ವಾರಕ್ಕೆ ಕನ್ನಡದಿಂದ ಒಂದೇ ಒಂದು ಚಿತ್ರ ಮಾತ್ರ ಬಿಡುಗಡೆ.

2021ರ ಅಕ್ಟೋಬರ್ 29 ಕನ್ನಡಿಗರ ಪಾಲಿಗೊಂದು ಕರಾಳ ದಿನ. ಯುವಚೈತನ್ಯ, ಕನ್ನಡದ ರಾಜರತ್ನ ಪುನೀತ್ ರಾಜಕುಮಾರ್ ಅರ್ಧ ಪಯಣದಲ್ಲೇ ನಮ್ಮನ್ನೆಲ್ಲ ಅಗಲಿ ಹೊರಟ ದಿನ. 46 ವರ್ಷದ ಅಪ್ಪು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು. ಇದೀಗ ಕನ್ನಡ ಚಲನಚಿತ್ರಗಳ ವಿತರಕರೆಲ್ಲರು ಸೇರಿ ಅಪ್ಪುವಿಗೊಂದು ಕಾಣಿಕೆ ನೀಡಲು ತಯಾರಾಗಿದ್ದಾರೆ.

‘ಯುವರತ್ನ’ನ ಕೊನೆಯ ಚಿತ್ರ ಜೇಮ್ಸ್ ಅನ್ನು ಇದೇ ಮಾರ್ಚ್ 17ರಂದು ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ಪ್ರಕಟಿಸಿದೆ. ಕೊನೆಯ ಬಾರಿ ಸಿನಿಮಂದಿರದಲ್ಲಿ ಅಪ್ಪುವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಹಾತೊರೆಯುತ್ತಿದ್ದಾರೆ. ಇದೇ ಕಾರಣಕ್ಕೆ ಕನ್ನಡ ಚಿತ್ರ ವಿತರಕರ ಮಂಡಳಿ ಮಾರ್ಚ್ 17ರಿಂದ 23ರ ವರೆಗೆ ‘ಜೇಮ್ಸ್’ ಹೊರತು ಬೇರಾವುದೆ ಚಿತ್ರವನ್ನು ಬಿಡುಗಡೆಗೊಳಿಸದಿರುವುದಾಗಿ ತೀರ್ಮಾನಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹಲವಾರು ಕೊಡುಗೆಗಳನ್ನು ನೀಡಿರುವ ಅಪ್ಪುಗೆ ಗೌರವ ಸೂಚಿಸುವ ಸಲುವಾಗಿ ಈ ನಿರ್ಧಾರವನ್ನ ಕೈಗೊಳ್ಳಲಾಗಿದೆ.

ಮಾರ್ಚ್ 17, 2022 ಪುನೀತ್ ರಾಜಕುಮಾರ್ ಅವರ 47ನೇ ಜನ್ಮದಿನ. ಇದೇ ದಿನ ಚಿತ್ರವನ್ನ ಪ್ರೇಕ್ಷಕರ ಮುಂದಿಡಬೇಕೆಂದು ‘ಜೇಮ್ಸ್’ ಚಿತ್ರತಂಡ ಹಗಲಿರುಳು ಶ್ರಮಿಸುತ್ತಿದೆ.

Leave a Reply

Your email address will not be published. Required fields are marked *