- February 15, 2022
ಹಾಟ್ ಲುಕ್ ಮೂಲಕ ಪಡ್ಡೆ ಹೈಕ್ಕಳ ಮನ ಕದ್ದ ಯಶಿಕಾ ಆನಂದ್

ತಮಿಳು ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಯಶಿಕಾ ಆನಂದ್ ನಟನೆಯ ಮೂಲಕವೂ ಮನೆ ಮಾತಾದ ಚೆಲುವೆ. ಕಳೆದ ವರ್ಷ ಭೀಕರ ಕಾರು ಅಪಘಾತಕ್ಕೆ ಈಡಾಗಿ ಗಂಭೀರವಾಗಿ ಗಾಯಗೊಂಡಿದ್ದ ಯಶಿಕಾ ಆನಂದ್ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಯಶಿಕಾ ಆನಂದ್ ಅವರು ಇದೀಗ ಫೋಟೋವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಫೋಟೋ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುತ್ತಿದ್ದ ಯಶಿಕಾ ಅಪಘಾತದ ನಂತರ ಸೋಶಿಯಲ್ ಮೀಡಿಯಾದಿಂದ ಸಹಜವಾಗಿ ಕೊಂಚ ದೂರ ಉಳಿದಿದ್ದರು. ಈಗ ಮತ್ತೆ ಆಕ್ಟೀವ್ ಆಗಿರುವ ಯಶಿಕಾ ನಟನೆಯತ್ತ ಮುಖ ಮಾಡಿದ್ದಾರೆ.

ಚಳಿಗಾಲ ಮುಗಿದು ಬೇಸಿಗೆ ಕಾಲ ಆರಂಭವಾಗಿದೆ. ಬಿರುಬೇಸಗೆಯಲ್ಲಿ ಹಾಟ್ ಫೋಟೋ ಹಂಚಿಕೊಂಡಿರುವ ನಟಿ ಯಶಿಕಾ “ಬೇಸಿಗೆಯ ದುಃಖ”ಎಂಬ ಕ್ಯಾಪ್ಶನ್ ಹಾಕಿದ್ದಾರೆ. ಈ ಫೋಟೋಗೆ ಲಕ್ಷಕ್ಕೂ ಮೀರಿದ ಲೈಕ್ಸ್ ಬಂದಿದ್ದು ಪಡ್ಡೆ ಹುಡುಗರ ಹೃದಯಕ್ಕೆ ಕನ್ನ ಹಾಕಿದ್ದಾರೆ.

ಕಳೆದ ವರ್ಷ ಮಧ್ಯರಾತ್ರಿ ಪಾರ್ಟಿ ಮುಗಿಸಿಕೊಂಡು ಬರುವಾಗ ಕಾರು ಅಪಘಾತಕ್ಕೆ ತುತ್ತಾಗಿ ಗಂಭೀರ ಗಾಯಗೊಂಡಿದ್ದರು. ಅವರ ಸ್ನೇಹಿತೆ ವಲ್ಲಿ ಚೆಟ್ಟಿ ಭವಾನಿ ಮೃತಪಟ್ಟಿದ್ದರು.

- ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನನಾಯಕನ್’ – ಪೊಂಗಲ್ 2026 ರಿಲೀಸ್!
- ವರಮಹಾಲಕ್ಷ್ಮೀಗೆ ಜೇಮ್ಸ್ ಡೈರೆಕ್ಟರ್ ಹೊಸ ಸಿನಿಮಾ ಅನೌನ್ಸ್…’ಬರ್ಮ’ ಚಿತ್ರಕ್ಕೆ ಗಟ್ಟಿಮೇಳ ರಕ್ಷ್ ನಾಯಕ
- ಎಸ್ತರ್ ನರೋನ ಈಗ ನಿರ್ದೇಶಕಿ….’ದಿ ವೆಕೆಂಟ್ ಹೌಸ್’ ಮೂಲಕ ಹೊಸ ಹೆಜ್ಜೆ ಇಟ್ಟ ಮಂಗಳೂರು ಸುಂದರಿ.
- ಮತ್ತೆ ಒಂದಾದ ’ಬಡವ ರಾಸ್ಕಲ್’ ತಂಡ.. ಡಾಲಿ ಧನಂಜಯ್ ಹುಟ್ಟುಹಬ್ಬಕ್ಕೆ ’ಅಣ್ಣ From Mexico’ ಸಿನಿಮಾ ಅನೌನ್ಸ್*
- ಯಶ್ ಅಭಿಮಾನಿಗಳಿಗೆ ಕ್ಷಮೆ ಕೇಳಿದ ತಮಿಳು ನಟ ಜೈ ಆಕಾಶ್
- ಸ್ಲೀಪ್ ವೆಲ್ ಕಿರುಚಿತ್ರಕ್ಕೆ ಸಿಕ್ತು ಪ್ರಶಸ್ತಿಗಳ ಸುರಿಮಳೆ.
- ಸಿನಿಮಾಟೋಗ್ರಾಫರ್ ಮಸೂದೆ ಅಂಗೀಕಾರ, ಪೈರಸಿಗೆ ಬಿತ್ತು ಬ್ರೇಕ್, ನಿಯಮ ಉಲ್ಲಂಘಿಸಿದರೆ ಜೈಲೂಟ ಗ್ಯಾರಂಟಿ.
- ವಾ…ವಾ…ವಾ…ವಾಮನ ಹಾಡು ಬಂತು….ಶೋಕ್ದಾರ್ ಧನ್ವೀರ್ ಮಾಸ್ ಎಂಟ್ರಿ
- ಡೈರೆಕ್ಟರ್ ಕ್ಯಾಪ್ ತೊಟ್ಟ ಚುಟು ಚುಟು ಕೋರಿಯೋಗ್ರಫರ್..ಹೀರೋ ಆದ ಭೂಷಣ್ ಮಾಸ್ಟರ್ ಈಗ ಡೈರೆಕ್ಟರ್…
- ‘ಹಾಸ್ಟೆಲ್ ಹುಡುಗರಿಗೆ’ ಜಯ..ಕೇಸ್ ಗೆದ್ದ ಖುಷಿಯಲ್ಲಿ ಬಾಯ್ಸ್ ಸಂಭ್ರಮ..ರಮ್ಯಾ ಲೇಡಿ ಸೂಪರ್ ಸ್ಟಾರ್ ಎಂದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಡೈರೆಕ್ಟರ್.
