- December 23, 2021
83 ಸಿನಿಮಾ ಜೊತೆ ವಿಕ್ರಾಂತ್ ರೋಣನ ಆರ್ಭಟ !

ರಣ್ವೀರ್ ಸಿಂಗ್ ಅಭಿನಯದ 83 ಸಿನಿಮಾ ಇದೇ ವಾರ ತೆರೆಗೆ ಬರಲಿದೆ… ಈಗಾಗಲೇ ಸಿನಿಮಾದ ಸ್ಪೆಷಲ್ ಶೋ ಗಳು ಪ್ರದರ್ಶನವಾಗಿದ್ದು ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ…
ಕನ್ನಡದಲ್ಲಿಯೂ 83 ಸಿನಿಮಾ ಬಿಡುಗಡೆಯಾಗುತ್ತಿದ್ದು ಸಿನಿಮಾದ ವಿತರಣ ಹಕ್ಕನ್ನು ಜಾಕ್ ಮಂಜು ಪಡೆದುಕೊಂಡಿದ್ದಾರೆ .. ವಿಶೇಷ ಅಂದ್ರೆ 83 ಸಿನಿಮಾದ ಜೊತೆ ವಿಕ್ರಾಂತ್ ರೋಣ ಕೂಡ ಪ್ರೇಕ್ಷಕರ ಮುಂದೆ ಬರಲಿದ್ದಾನೆ ..ಮಾದು ಹೇಗೆ ಅಂತೀರಾ ..ಕಿಚ್ಚ ಸುದೀಪ್ ಅಭಿನಯದ ಜಾಕ್ ಮಂಜು ನಿರ್ಮಾಣದ ವಿಕ್ರಾಂತ್ ರೋಣ ಚಿತ್ರದ ಥ್ರೀಡಿ ಗ್ಲಿಂಪ್ಸ್ ಅಂದರೆ ಕೆಲವು ದೃಶ್ಯಗಳು 83 ಸಿನಿಮಾದ ಇಂಟರ್ವಲ್ ಬ್ಲಾಕ್ ನಲ್ಲಿ ಪ್ರದರ್ಶನವಾಗಲಿದೆ…

ವಿಕ್ರಾಂತ್ ರೋಣ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆಯಾಗಲು ಸಿದ್ಧವಾಗಿರುವರಿಂದ 83ಚಿತ್ರ ಬಿಡುಗಡೆಯಾಗುವ ಕಡೆಯಲೆಲ್ಲಾ ವಿಕ್ರಾಂತ್ ರೋಣ ಚಿತ್ರದ ಗ್ಲಿಂಪ್ಸ್ ಪ್ರದರ್ಶನ ಆಗಲಿದೆ…ಈ ಮೂಲಕ ವಿಕ್ರಾಂತ್ ರೋಣ ದೇಶದ ಮೂಲೆ ಮೂಲೆಗೂ ತಲುಪಲಿದೆ…