- December 26, 2021
ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ವಿಜಯ್ ಸೇತುಪತಿಗೆ ಸ್ಟಾರ್ ಹೀರೋಯಿನ್ ಜೋಡಿ…

ಕಾಲಿವುಡ್ ನ ನಟ ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ
.. ತಮ್ಮ ವಿಶಿಷ್ಟ ಅಭಿನಯದಿಂದಲೇ ಅಪಾರ ಅಭಿಮಾನಿಗಳನ್ನ ಪಡೆದುಕೊಂಡಿರುವ ವಿಜಯ್ ಸೇತುಪತಿ ಈಗ ಬಿಟೌನ್ ನ ಅಭಿಮಾನಿಗಳನ್ನು ರಂಜಿಸಲು ಸಿದ್ಧರಾಗಿದ್ದಾರೆ…

ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ವಿಜಯ್ ಸೇತುಪತಿಯ ಜೊತೆಯಾಗಿ ಬಿಟೌನ್ ನ*ನಟಿ ಕತ್ರಿನಾ ಕೈಫ್ ನಟಿಸುತ್ತಿದ್ದಾರೆ …. ಚಿತ್ರಕ್ಕೆ ಮೇರಿ ಕ್ರಿಸ್ ಮಸ್ ಎಂಬ ಶೀರ್ಷಿಕೆ ಇಟ್ಟಿದ್ದು ಶ್ರೀರಾಮ್ ರಾಘವನ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.. ನಿನ್ನೆ ಕ್ರಿಸ್ಮಸ್ ವಿಶೇಷವಾಗಿ ಕತ್ರಿನಾ ಕೈಫ್ ತಮ್ಮ ಅಭಿಮಾನಿಗಳೊಂದಿಗೆ ಈ ಖುಷಿಯ ವಿಚಾರ ಹಂಚಿಕೊಂಡಿದ್ದಾರೆ..

ತನ್ನ ಅಭಿಮಾನಿಗಳೊಂದಿಗೆ ತನ್ನ ಹೊಸ ಚಿತ್ರದ ಸುದ್ದಿಯನ್ನು ಹಂಚಿಕೊಂಡ ನಟಿ ತನ್ನ ತಂಡದೊಂದಿಗೆ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಕತ್ರಿನಾ ಬರೆದುಕೊಂಡಿದ್ದಾರೆ, ಮೆರ್ರಿ ಕ್ರಿಸ್‌ಮಸ್‌ಗಾಗಿ ನಿರ್ದೇಶಕ ಶ್ರೀರಾಮ್ ರಾಘವನ್ ಅವರೊಂದಿಗೆ ಸೆಟ್‌ಗೆ ಹಿಂತಿರುಗಿದ್ದೇನೆ. ನಾನು ಯಾವಾಗಲೂ ಶ್ರೀರಾಮ್ ಸರ್ ಅವರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ. ಥ್ರಿಲ್ಲರ್ ಅನ್ನು ಪ್ರದರ್ಶಿಸುವ ನಿರೂಪಣೆಗೆ ಬಂದಾಗ ಅವರು ಮಾಸ್ಟರ್ ಆಗಿದ್ದಾರೆ ಎಂದಿದ್ದಾರೆ…