- December 9, 2021
ಓಟದ ಮೂಲಕ ಅಪ್ಪು ಸಮಾಧಿಗೆ ಹೊರಟ ಮಹಿಳೆಯ ಆರೋಗ್ಯ ವಿಚಾರಿಸಿದ್ರು ರಾಘಣ್ಣ

ನೆಚ್ಚಿನ ನಟನನ್ನು ಕಳೆದುಕೊಂಡು ಕರುನಾಡು ಇನ್ನೂ ಕೊರಗುತ್ತಲೇ ಇದೆ. ಹಲವರ ಅಭಿಮಾನ ಹಲವಾರು ರೀತಿಯಲ್ಲಿ ಇರುತ್ತದೆ. ಅನೇಕ ಅಭಿಮಾನಿಗಳು ಅಪ್ಪು ಮೇಲಿನ ಅವರ ಅಭಿಮಾನವನ್ನು ವಿವಿದ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.

ಅವರ ಅಭಿಮಾನಿಯೊಬ್ಬರು ಅಪ್ಪು ಸಮಾಧಿ ದರ್ಶನ ಮಾಡಲು ಧಾರವಾಡದಿಂದ ಬೆಂಗಳೂರಿನವರೆಗೆ ಓಟದ ಮೂಲಕ ತಲುಪಲು ನಿರ್ಧರಿಸಿ ಕಳೆದ ತಿಂಗಳು ನವೆಂಬರ್ 29ರಂದು ತಮ್ಮ ಗ್ರಾಮದಿಂದ ಓಟ ಶುರುಮಾಡಿರುವ ಮಹಿಳೆ ಅಪ್ಪು ಅಪ್ಪಟ ಅಭಿಮಾನಿ.

ಮೂರು ಮಕ್ಕಳ ತಾಯಿಯಾಗಿರುವ ಈಕೆ ಈಗಾಗಲೇ ಚಿತ್ರದುರ್ಗವನ್ನು ತಲುಪಿದ್ದಾರೆ. ವಿಷಯ ತಿಳಿದ ರಾಘವೇಂದ್ರ ರಾಜ್ ಕುಮಾರ್ ಅವರು ಮಹಿಳೆಯ ಆರೋಗ್ಯದ ಕಡೆ ಗಮನ ಕೊಡಲು ತಿಳಿಸಿದ್ದಾರೆ.

ಅಪ್ಪು ವಿವಿಧ ರೀತಿಯಲ್ಲಿ ಇಂದೀಗೂ ಜೀವಂತವಾಗಿದ್ದಾರೆ.