- February 6, 2022
ಭತ್ತದ ಪೈರಿನಲ್ಲಿ ಮೂಡಿಬಂದ ಪುನೀತ್ ರಾಜ್ ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಲ್ಲರನ್ನ ಅಗಲಿ 100 ದಿನಗಳು ಕಳೆದಿವೆ… ಅಂದಿನಿಂದ ಇಂದಿನವರೆಗೂ ಅಭಿಮಾನಿಗಳು ಅಪ್ಪು ಅವ್ರಿಗೆ ವಿವಿಧ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ… ಇತ್ತೀಚೆಗಷ್ಟೇ ಭತ್ತ ದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿರುವ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತು…

ಈಗ ಅದೇ ಭತ್ತ ಮೊಳಕೆಯೂಡೆದು ಹಸಿರಾಗಿ ಎಲ್ಲರ ಗಮನ ಸೆಳೆಯುತ್ತಿದೆ…ಮಂಡ್ಯದ ಅಭಿಮಾನಿಯೊಬ್ಬರು ಪುನೀತ್ ಅವರಿಗೆ ವಿಶೇಷ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಬೇಕು ಎನ್ನುವ ನಿಟ್ಟಿನಲ್ಲಿ ತಮ್ಮ ಜಮೀನಿನಲ್ಲಿ ಭತ್ತದ ಪೈರಿನ ಮೂಲಕ ಪುನೀತ್ ರಾಜ್ ಹೆಸರನ್ನ ಬೆಳೆಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ….



ಮಂಡ್ಯ ಮೂಲದ ಮತ್ತಳ್ಳಿ ಗ್ರಾಮದ ರೈತ ಕಾಳಪ್ಪ ರಾಜು ಭತ್ತದಲ್ಲಿ ಮತ್ತೆ ಹುಟ್ಟಿ ಬಾ ಪುನೀತ್ ರಾಜ್ ಕುಮಾರ್ ಅಪ್ಪು ಎಂದು ವಿಭಿನ್ನ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದರು… ಈಗ ಅದೇ ಜಾಗದಲ್ಲಿ ಭತ್ತದ ಪೈರು ಬೆಳೆದು ನಿಂತು ಹಸಿರಿನ ಮಧ್ಯೆ ಪುನೀತ್ ಹೆಸರು ರಾರಾಜಿಸುತ್ತಿದೆ ಇದನ್ನ ಕಂಡ ಆ ರೈತನಿಗೆ ಬೇಷ್ ಎನ್ನುತ್ತಿದ್ದಾರೆ ….
