• July 2, 2022

ಒಟಿಟಿ ಪರದೆ ಏರಿದ ಮತ್ತೊಂದು ಸಿನಿಮಾ

ಒಟಿಟಿ ಪರದೆ ಏರಿದ ಮತ್ತೊಂದು ಸಿನಿಮಾ

ಕೃಷ್ಣ ಎಂದೇ ಕನ್ನಡ ನಾಡಿನಲ್ಲಿ ಪ್ರಸಿದ್ದರಾಗಿರುವ ಅಜಯ್ ರಾವ್ ಅವರು ನಟಿಸಿ ಇದೇ ಏಪ್ರಿಲ್ 29ರಂದು ಬಿಡುಗಡೆಯಾಗಿದ್ದ ಸಿನಿಮಾ ‘ಶೋಕಿವಾಲ’.ಚಿತ್ರಮಂದಿರಗಳಲ್ಲಿ ಕನ್ನಡಿಗರ ಮನಸೆಳೆಯುವಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯಾಗಿದ್ದ ಈ ಸಿನಿಮಾ ಒಂದಷ್ಟರ ಮಟ್ಟಿಗೆ ಒಳ್ಳೆಯ ಓಟವನ್ನೇ ಪಡೆದಿತ್ತು. ಕೃಷ್ಣ ಅಜಯ್ ರಾವ್ ಅವರಿಗೆ ಸಂಜನಾ ಆನಂದ್ ಜೋಡಿಯಾಗಿ ನಟಿಸಿದ್ದ ಈ ಚಿತ್ರ ಇದೀಗ ಒಟಿಟಿ ಪರದೆ ಏರಲು ಸಿದ್ಧವಾಗಿದೆ.

ಜಾಕಿ ಅವರು ನಿರ್ದೇಶಿಸಿ ‘ಕ್ರಿಸ್ಟಲ್ ಪಾರ್ಕ್ ಸಿನಿಮಾಸ್’ ಬ್ಯಾನರ್ ಅಡಿಯಲ್ಲಿ ಟಿ ಆರ್ ಚಂದ್ರಶೇಖರ್ ಅವರು ನಿರ್ಮಾಣ ಮಾಡಿದ್ದ ಈ ಚಿತ್ರ ಗ್ರಾಮೀಣ ಹಿನ್ನೆಲೆ ಇರುವ ಕಥೆಯೊಂದನ್ನು ಹೊಂದಿತ್ತು. ಎಲ್ಲರೂ ಪ್ರೀತಿಸಲು ಇಷ್ಟ ಪಡೋ ಕೃಷ್ಣ ಅದೇ ಊರಿನ ರಾಧಾಳನ್ನ ಪ್ರೀತಿಸಿ, ಇವರ ಬದುಕಿನಲ್ಲಾಗುವ ಘಟನೆಗಳನ್ನ ಹೇಳುವಂತ ಒಂದು ರೋಮ್ಯಾಂಟಿಕ್ ಎಂಟರ್ಟೈನರ್ ವಿಷಯ ಹೊಂದಿರೋ ಸಿನಿಮಾ ಇದು. ಸದ್ಯ ‘ಸನ್ ನೆಕ್ಸ್ಟ್(SUN NXT) ನಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಮೂಲಕ ಚಿತ್ರಮಂದಿರಗಳಲ್ಲಿ ಈ ಹಾಸ್ಯಮಯ ರೋಮ್ಯಾಂಟಿಕ್ ಪ್ರೇಮಕಥೆಯನ್ನು ಮಿಸ್ ಮಾಡಿಕೊಂಡ ಸಿನಿಪ್ರೇಮಿಗಳು sun ನೆಕ್ಸ್ಟ್ ಆಪ್ ಮೂಲಕ ನೋಡಬಹುದಾಗಿದೆ. ಅಜಯ್ ರಾವ್ ಹಾಗು ಸಂಜನಾ ಅವರ ಜೊತೆಗೆ ಶರತ್ ಲೋಹಿತಾಶ್ವ, ತಬಲಾ ನಾನಿ, ಅರುಣಾ ಬಾಲರಾಜ್ ಮುಂತಾದವರು ನಟಿಸಿದ್ದು, ಶ್ರೀಧರ್ ಸಂಭ್ರಮ್ ಅವರು ಚಿತ್ರಕ್ಕೆ ಸಂಗೀತ ತುಂಬಿದ್ದಾರೆ.

Leave a Reply

Your email address will not be published. Required fields are marked *