- February 2, 2022
ಜೇಮ್ಸ್ ಸಿನೆಮಾ ಡಬ್ಬಿಂಗ್ ತುಂಬಾ ಕಷ್ಟ ಆಯ್ತು ಅಂದಿದ್ದೇಕೆ ಶಿವಣ್ಣ

ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ…ಮುಂದಿನ ತಿಂಗಳು ಅಂದರೆ ಪುನೀತ್ ಹುಟ್ಟುಹಬ್ಬಕ್ಕೆ ಚಿತ್ರವನ್ನ ತೆರೆಗೆ ತರಲು ಸಿನಿಮಾ ತಂಡ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ
ಪುನೀತ್ ಅಕಾಲಿಕ ಮರಣದಿಂದಾಗಿ ಜೇಮ್ಸ್ ಸಿನಿಮಾದ ಡಬ್ಬಿಂಗ್ ಬಾಕಿ ಉಳಿದಿತ್ತು.. ಚಿತ್ರ ದಲ್ಲಿನ ಪುನೀತ್ ಪಾತ್ರಕ್ಕೆ ಯಾರು ಡಬ್ಬಿಂಗ್ ಮಾಡುತ್ತಾರೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು…ಈಗ ಪುನೀತ್ ಪಾತ್ರಕ್ಕೆ ನಟ ಶಿವರಾಜ್ ಕುಮಾರ್ ಧ್ವನಿಯಾಗಿದ್ದಾರೆ… ಸುಮಾರು 2ದಿನಗಳ ಕಾಲ ಜೇಮ್ಸ್ ಸಿನಿಮಾಗಾಗಿ ಡಬ್ಬಿಂಗ್ ಮಾಡಿರುವ ಶಿವರಾಜ್ ಕುಮಾರ್ …ಪುನೀತ್ ಪಾತ್ರಕ್ಕೆ ಡಬ್ ಮಾಡುವುದು ತುಂಬಾನೇ ಕಷ್ಟ ಆಯ್ತು ಎಂದಿದ್ದಾರೆ ..

ಒಬ್ಬ ನಟನನ್ನ ಇಮಿಟೇಟ್ ಮಾಡಿ ಡಬ್ಬಿಂಗ್ ಮಾಡುವುದು ತುಂಬ ಕಷ್ಟ ..ಅದರಲ್ಲೂ ಪುನೀತ್ ಅಭಿನಯಕ್ಕೆ ಧ್ವನಿ ಹೊಂದಿಸುವುದು ಚಾಲೆಂಜ್ ಆಗಿತ್ತು…ಆದರೆ ಡಬ್ಬಿಂಗ್ ಮಾಡಿದ್ದೇನೆ ಪ್ರೇಕ್ಷಕರಿಗೂ ಕೂಡ ಧ್ವನಿ ಇಷ್ಟವಾಗತ್ತೆ ಎಂದುಕೊಂಡಿದ್ದೇನೆ ಎಂದಿದ್ದಾರೆ…ಜೇಮ್ ಸಿನಿಮಾವನ್ನ ಚೇತನ್ ಕುಮಾರ್ ನಿರ್ದೇಶನ ಮಾಡಿದ್ದು ವಿಜಯ ಕೊಂಡ ನಿರ್ಮಾಣ ಮಾಡಿದ್ದಾರೆ…ಚಿತ್ರದಲ್ಲಿ ಪ್ರಿಯಾ ಆನಂದ್ ನಾಯಕಿಯಾಗಿ ನಟಿಸಿದ ಇದೇ ಮೊದಲ ಬಾರಿಗೆ ಮಿಲಿಟರಿ ಆಫೀಸರ್ ಪಾತ್ರದಲ್ಲಿ ಪುನೀತ್ ಮಿಂಚಿದ್ದಾರೆ …ಅಂದಹಾಗೆ ಇದು ಪುನೀತ್ ಅಭಿನಯದ ಕೊನೆಯ ಚಿತ್ರವಾಗಲಿದೆ