• April 25, 2022

‘ಘೋಸ್ಟ್(Ghost)’ ಆಗಿ ಬರಲಿದ್ದಾರೆ ಶಿವಣ್ಣ.

‘ಘೋಸ್ಟ್(Ghost)’ ಆಗಿ ಬರಲಿದ್ದಾರೆ ಶಿವಣ್ಣ.

‘ಕರುನಾಡ ಚಕ್ರವರ್ತಿ’ ಶಿವರಾಜಕುಮಾರ್ ಅವರು ವಯಸ್ಸೇರಿದಂತೆ ಹೆಚ್ಚೆಚ್ಚು ಚೈತನ್ಯಶಾಲಿಯಾಗುವವರು. ಒಂದೇ ಶಕ್ತಿ, ಒಂದೇ ಉತ್ಸಾಹದಿಂದ ಸುಮಾರು 125 ಚಿತ್ರಗಳನ್ನ ಕನ್ನಡಿಗರೆದುರು ಇಟ್ಟಿರುವ ಶಿವಣ್ಣ, ಇದೀಗ ಹೊಸತೊಂದು ಚಿತ್ರಕ್ಕೆ ಸಜ್ಜಾಗಿದ್ದಾರೆ. ‘ಬೀರಬಲ್’ ಹಾಗು ‘ಓಲ್ಡ್ ಮಂಕ್’ ಖ್ಯಾತಿಯ ಎಂ ಜಿ ಶ್ರೀನಿವಾಸ್ ಅಕಾ ಶ್ರೀನಿ ನಿರ್ದೇಶನದ ಮುಂದಿನ ಚಿತ್ರದ ನಾಯಕರಾಗಿರಲಿದ್ದಾರೆ ಶಿವಣ್ಣ.

ನಿನ್ನೆ(ಏಪ್ರಿಲ್ 24) ಡಾ| ರಾಜಕುಮಾರ್ ಅವರ ಜನುಮದಿನದ ಅಂಗವಾಗಿ ಶಿವರಾಜ್ kumarಕುಮಾರ್ ಅವರ ಹೊಸ ಚಿತ್ರದ ‘ಕಾನ್ಸೆಪ್ಟ್ ಪೋಸ್ಟರ್’ ಒಂದನ್ನ ಬಿಡುಗಡೆಗೊಳಿಸಿದೆ ಚಿತ್ರತಂಡ. ‘ಘೋಸ್ಟ್’ ಎಂದು ಹೆಸರು ಪಡೆದಿರೋ ಈ ಚಿತ್ರ ಒಂದು ಆಕ್ಷನ್ ಥ್ರಿಲರ್ ಆಗಿರಲಿದೆಯಂತೆ. ವಿಭಿನ್ನ ಪ್ರಯತ್ನಗಳಿಗೆ ಹೆಸರಾಗಿರುವ ಎಂ ಜಿ ಶ್ರೀನಿವಾಸ್ ಅಕ ಶ್ರೀನಿ ತಮ್ಮ ಕನಸಿನಂತೆ ಶಿವರಾಜಕುಮಾರ್ ಅವರಿಗೆ ಸಿನಿಮಾ ನಿರ್ದೇಶಸುತ್ತಿದ್ದಾರೆ.ಹೆಸರಾಂತ ನಿರ್ಮಾಪಕ ಸಂದೇಶ್ ನಾಗರಾಜ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರೋ 29ನೇ ಚಿತ್ರ ಇದಾಗಿದೆ.

ಮೂಲಗಳ ಪ್ರಕಾರ ಇದೊಂದು ಹಾಸ್ಟೇಜ್-ಥ್ರಿಲರ್ ಕಥೆಯಾಗಿದೆ. ಜೈಲಿನ ಕಂಬಿಗಳ ಹಿಂದೆ ಗನ್ ಹಿಡಿದು ನಿಂತಿರೋ ಶಿವಣ್ಣ ಸಕತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.”They feared him because he feared nothing” ಅರ್ಥಾತ್ “ಇವನು ಯಾರಿಗೂ ಹೆದರುತ್ತಿರಲಿಲ್ಲ, ಅದಕ್ಕೆ ಅವರು ಇವನಿಗೆ ಹೆದರುತ್ತಿದ್ದರು” ಎಂಬ ಟ್ಯಾಗ್ ಲೈನ್ ನೊಂದಿಗೆ ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ ನಿರ್ದೇಶಕರು. ಚಿತ್ರದ ಬಗೆಗಿನ ಹೆಚ್ಚಿನ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ. ಚಿತ್ರದ ಚಿತ್ರೀಕರಣದ ಬಗೆಗಿನ ಮಾಹಿತಿಗಳು ಕೂಡ ಇನ್ನಷ್ಟೇ ಹೊರಬೀಳಬೇಕಿದೆ.

Leave a Reply

Your email address will not be published. Required fields are marked *