• December 16, 2021

ಕನ್ನಡ ಬಾವುಟ ಸುಟ್ಟ ಪ್ರಕರಣ- ಸಿಡಿದೆದ್ದ ಸ್ಯಾಂಡಲ್ ವುಡ್

ಕನ್ನಡ ಬಾವುಟ ಸುಟ್ಟ ಪ್ರಕರಣ- ಸಿಡಿದೆದ್ದ ಸ್ಯಾಂಡಲ್ ವುಡ್

ಮಹಾರಾಷ್ಟ್ರ ದ ಕೊಲ್ಲಾಪುರದಲ್ಲಿ ಕನ್ನಡ ಭಾವುಟ ಸುಟ್ಟ ಪ್ರಕರಣ ತಾರಕಕ್ಕೇರಿದೆ..ಎಂಈಎಸ್ ಪುಂಡಾಟ ಕಂಡು ಸ್ಯಾಂಡಲ್ ವುಡ್ ಮಂದಿ ಗರಂ ಆಗಿದ್ದಾರೆ…ಕನ್ನಡ ಬಾವುಟ ಸುಟ್ಟ ಪುಂಡರನ್ನ ಬಂದಿಸುವಂತೆ ಸಿನಿಮಾ ಕಲಾವಿದರು ಪಟ್ಟು ಹಿಡಿದ್ದಿದ್ದಾರೆ‌..

ಕನ್ನಡ ನಾಡು‌ ನುಡಿಗೆ ಸಮಸ್ಯೆ ಮಾಡುವವರಿಗೆ ಶಿಕ್ಷೆ ಆಗಬೇಕು ಎಂದು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರೆ ಸ್ಯಾಂಡಲ್ ವುಡ್ ಸ್ಟಾರ್ ಗಳು…ಮೊನ್ನೆ ಮಹರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡಾಂಭೆ ಬಾವುಟವನ್ನ‌ ಮರಾಠಿಗರು ಸುಟ್ಟು ಹಾಕಿದ್ರು..ಈ ಘಟನೆಯ ಬಗ್ಗೆ ಎಚ್ಚೆತ್ತುಕೊಂಡ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸಬೇಕು ಎಂದು ಸ್ಯಾಂಡಲ್ ವುಡ್ ಸ್ಟಾರ್ ಗಳ ಒತ್ತಾಯವಾಗಿದೆ…

ನಟ ಶಿವರಾಜ್ ಕುಮಾರ್, ದುನಿಯಾ ವಿಜಯ್, ನೆನಪಿರಲಿ ಪ್ರೇಮ್ ಇನ್ನು ಅನೇಕರು ಈ‌ಬಗ್ಗೆ ಟ್ವೀಟ್ ಮಾಡುವ ಮೂಲಕ ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕೆಂದು‌ ಪಟ್ಟು ಹಿಡಿದಿದ್ದಾರೆ…

Leave a Reply

Your email address will not be published. Required fields are marked *