• December 11, 2021

ಸರಿಗಮಪ ವೇದಿಕೆಯಲ್ಲಿ ಚಿರಂಜೀವಿ -ಕ್ರೇಜಿಸ್ಟಾರ್ ಸ್ನೇಹವನ್ನು ಮೆಲುಕು ಹಾಕಿದ ಸ್ಪರ್ಧಿಗಳು

ಸರಿಗಮಪ ವೇದಿಕೆಯಲ್ಲಿ ಚಿರಂಜೀವಿ -ಕ್ರೇಜಿಸ್ಟಾರ್ ಸ್ನೇಹವನ್ನು ಮೆಲುಕು ಹಾಕಿದ ಸ್ಪರ್ಧಿಗಳು

ಜೀ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ದಲ್ಲಿ ಈ ವಾರ ರವಿ ಹಂಸ ವೈಭವ ಎಂಬ ಶೀರ್ಷಿಕೆಯಡಿಯಲ್ಲಿ ಸ್ಪರ್ಧಿಗಳು ಹಾಡುಗಳನ್ನು ಹಾಡುತ್ತಿದ್ದಾರೆ….ರವಿಚಂದ್ರನ್ ವಿಶೇಷ ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದು ರವಿಮಾಮ ಹಾಗೂ ಹಂಸಲೇಖ ಕಾಂಬಿನೇಷನ್ ಹಾಡುಗಳು ನೋಡುಗರನ್ನ ರಂಜಿಸಲಿವೆ…

ಚನ್ನಪ್ಪ ಹಾಗೂ ಕೀರ್ತನ್ ಹೊಳ್ಳ ಸಿಪಾಯಿ ಸಿನಿಮಾದ ಸ್ನೇಹಕ್ಕೆ ಸ್ನೇಹ ಹಾಡನ್ನ ಹಾಡಿದ್ದು ಇದೇ ಸಂದರ್ಭದಲ್ಲಿ ರವಿಚಂದ್ರನ್ ತಮ್ಮ‌ ಹಾಗೂ ಮೆಗಾ ಸ್ಟಾರ್ ಚಿರಂಜೀವಿ ಮಧ್ಯೆ ಇರೋ ಸ್ನೇಹವನ್ನ ಮೆಲುಕು ಹಾಕಿದ್ರು…

ಸಿಪಾಯಿ ಸಿನಿಮಾದ ಪಾತ್ರಕ್ಕಾಗಿ ಚಿರಂಜೀವಿ ಅವ್ರನ್ನ ಎಲಿಕಾಪ್ಟರ್ ಮೂಲಕ ಕರೆಸಿದ್ರಂತೆ ಕ್ರೇಜಿಸ್ಟಾರ್ ಅಷ್ಟೇ ಅಲ್ಲ ಮತ್ತೆ ವಾಪಸ್ ಕೂಡ ಎಲೆಕಾಪ್ಟರ್ ಬುಕ್ ಮಾಡಿ ಕಳುಹಿಸಿಕೊಟ್ಟಿದ್ರಂತೆ…ಇನ್ನು ಚಿತ್ರದಲ್ಲಿ ಅಭಿನಯ ಮಾಡಲು ಒಂದೇ ಒಂದು ಫೋನ್ ಕಾಲ್ ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ರಂತೆ ಮೆಗಾಸ್ಟಾರ್ …

Leave a Reply

Your email address will not be published. Required fields are marked *