- January 31, 2022
ಅಕ್ಕನ ಮುದ್ದಾದ ಫೋಟೋದೊಂದಿಗೆ ಅಕ್ಕನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ರಚಿತಾ

ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ತಮ್ಮ ಅಕ್ಕನಿಗೆ ವಿಶೇಷವಾಗಿ ಶುಭಾಶಯ ಕೋರಿದ್ದಾರೆ ..
ಎಲ್ಲರಿಗೂ ತಿಳಿದಿರುವಂತೆ ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ಕೂಡ ಸಿನಿಮಾ ಕಲಾವಿದೆ… ಕಿರುತೆರೆಯಲ್ಲಿ ಭಾರಿ ಪ್ರಖ್ಯಾತಿ ಗಳಿಸಿರೋ ನಿತ್ಯ ಮದುವೆಯಾಗಿ ವಿದೇಶದಲ್ಲಿ ವಾಸವಾಗಿದ್ದಾರೆ… ಅಕ್ಕ ನನ್ನ ಮಿಸ್ ಮಾಡಿಕೊಳ್ಳುತ್ತಿರುವ ರಚಿತಾ ಅಕ್ಕನ ಹುಟ್ಟುಹಬ್ಬಕ್ಕೆ ಸ್ಪೆಷಲ್ ಆಗಿರುವ ಫೋಟೋವನ್ನು ಶೇರ್ ಮಾಡಿ ಶುಭ ಕೋರಿದ್ದಾರೆ ..

ಸಣ್ಣ ವಯಸ್ಸಿನಲ್ಲಿ ನಿತ್ಯಾರಾಮ್ ರಚಿತಾ ರಾಮ್ ಅವರನ್ನ ಎತ್ತಿಕೊಂಡಿರುವ ಅಂತಹ ಹಳೆ ಫೋಟೋಗಳನ್ನ ಶೇರ್ ಮಾಡುವ ಮೂಲಕ ಹುಟ್ಟುಹಬ್ಬದಂದು ಹಳೆ ನೆನಪುಗಳನ್ನು ಮೆಲುಕು ಹಾಕಿದ್ದಾರೆ ನಟಿ ರಚಿತಾ ..
