- January 1, 2022
ನಿಗದಿಯಾಗಿದ್ದ ದಿನಾಂಕಕ್ಕೆ ಬಿಡುಗಡೆಯಾಗುವುದಿಲ್ಲ ಆರ್ ಆರ್ ಆರ್ ಸಿನಿಮಾ

ರಾಜಮೌಳಿ ನಿರ್ದೇಶನದ ಜೂನಿಯರ್ ಎನ್ ಟಿ ಆರ್ ಹಾಗೂ ರಾಮ್ ಚರಣ್ ಅಭಿನಯದ ತ್ರಿಬಲ್ ಆರ್ ಸಿನಿಮಾ ಜನವರಿ 7ರಂದು ಬಿಡುಗಡೆಯಾಗಬೇಕಿತ್ತು… ಆದರೆ ದೇಶದಾದ್ಯಂತ ಎಲ್ಲೆಡೆ ಒಮಿಕ್ರಾನ್ ಸೋಂಕು ಹೆಚ್ಚಾಗಿರುವ ಕಾರಣ ಚಿತ್ರತಂಡ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲು ನಿರ್ಧಾರ ಮಾಡಿದೆ..

ತ್ರಿಬಲ್ ಆರ್ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, 5ಭಾಷೆಯಲ್ಲಿ ಸಿನಿಮಾ ತೆರೆಗೆ ಬರಲಿದೆ , ಈಗಾಗಲೇ ಚಿತ್ರದ ಪ್ರಚಾರ ಕಾರ್ಯವನ್ನು ಆರಂಭಿಸಿದ ಚಿತ್ರತಂಡ ಜನವರಿ 7ರಂದು ಸಿನಿಮಾವನ್ನ ವಿಶ್ವದಾದ್ಯಂತ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿತ್ತು… ಆದರೆ ಓಮಿಕಾನ್ ಸೋಂಕಿನ ಸಂಖ್ಯೆ ಎಲ್ಲೆಡೆ ಹೆಚ್ಚಾಗಿರೋದ್ರಿಂದ ದೇಶದ ಬಹುತೇಕ ರಾಜ್ಯಗಳಲ್ಲಿ ಚಿತ್ರಮಂದಿರಗಳನ್ನ ಮುಚ್ಚಲು ನಿರ್ಧಾರ ಮಾಡಲಾಗಿದೆ.. ಆದ್ದರಿಂದ ತ್ರಿಬಲ್ ಆರ್ ಸಿನಿಮಾ ಸಿನಿಮಾತಂಡ ಚಿತ್ರವನ್ನ ಬಿಡುಗಡೆ ಮಾಡುವ ದಿನಾಂಕವನ್ನು ಮುಂದೂಡಿದೆ… ಸದ್ಯ ಆದಷ್ಟು ಬೇಗ ಒಳ್ಳೆ ಸಮಯಕ್ಕೆ ನಿಮ್ಮ ಮುಂದೆ ಬರುತ್ತೇವೆ ಎಂದು ತಿಳಿಸಿರುವ ಚಿತ್ರತಂಡ ಮುಂದಿನ ಬಿಡುಗಡೆ ದಿನಾಂಕ ಇನ್ನೂ ಕೂಡ ನಿಗದಿ ಮಾಡಿಲ್ಲ
