• December 9, 2021

ಪುಷ್ಪ‌ ಚಿತ್ರದ ಸಮಂತಾ ಹಾಟ್ ಲುಕ್ ಗೆ ಫ್ಯಾನ್ಸ್ ಫಿದಾ

ಪುಷ್ಪ‌ ಚಿತ್ರದ ಸಮಂತಾ ಹಾಟ್ ಲುಕ್ ಗೆ ಫ್ಯಾನ್ಸ್ ಫಿದಾ

ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಸಖತ್ ಸದ್ದು ಮಾಡ್ತಿರೋ ಸಿನಿಮಾ ಪುಷ್ಪ …ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ಅಭಿನಯ ಮಾಡುತ್ತಿರುವ ಪುಷ್ಪ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ… ಈಗಾಗಲೇ ಟ್ರೈಲರ್ ಹಾಗೂ ಹಾಡುಗಳ ಮೂಲಕ ಸಖತ್ ಸೌಂಡ್ ಮಾಡಿರುವ ಪುಷ್ಪ ಚಿತ್ರದಲ್ಲಿ ಸಮಂತಾ ಸ್ಪೆಷಲ್ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದಾರೆ…

ಈ ಹಿಂದೆ ಯಾವುದೇ ಸಿನಿಮಾಗಳಲ್ಲಿ ಸ್ಪೆಷಲ್ ಸಾಂಗ್ ನಲ್ಲಿ ಕಾಣಿಸಿಕೊಳ್ಳದ ಸಮಂತಾ ಪುಷ್ಪ ಸಿನಿಮಾದಲ್ಲಿ ಸಖತ್ ಬೋಲ್ಡ್ ಲುಕ್ ನಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು ಆದ್ರೆ ಈಗ ಚಿತ್ರದಲ್ಲಿನ ಸಮಂತಾ ಲುಕ್ ರಿವಿಲ್ ಆಗಿದೆ

ಸಮಂತಾ ಡ್ಯಾನ್ಸ್ ಮಾಡಿರೋ ಹಾಡು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಪೋಸ್ಟರ್ ಮೂಲಕ ರಿವೀಲ್ ಮಾಡಿದೆ ಪೋಸ್ಟರ್ ನೋಡ್ತಿದ್ರೆ ಸಮಂತಾ ಐಟಂ ಸಾಂಗಿಗೆ ಹೆಜ್ಜೆ ಹಾಕಿರುವ ಕನ್ಫರ್ಮ್ ಆಗ್ತಿದೆ

ಸಮಂತಾ ಸ್ಪೆಷಲ್ ಹಾಡಿನಲ್ಲಿ‌ ಹೆಜ್ಜೆ ಹಾಕಲು ಬರೋಬ್ಬರಿ 1.5 ಕೋಟಿ ರೂಪಾಯಿ ಪಡೆದಿದ್ದಾರೆ ಎಂಬ ಸುದ್ದಿ ಹರಡಿದೆ….ಸದ್ಯ ರಿವಿಲ್ ಆಗಿರೋ ಲುಕ್ ನಲ್ಲಿ ಸಮಂತಾ ನೀಲಿ ಬಣ್ಣದ ಉಡುಗೆ ತೊಟ್ಟಿದ್ದಾರೆ. ಅವರ ಲುಕ್ ಮಾದಕವಾಗಿದೆ. ಈ ವಿಶೇಷ ಹಾಡನ್ನು ಡಿಸೆಂಬರ್ 10ರಂದು ರಿಲೀಸ್ ಮಾಡುತ್ತಿರುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಈ ಮಾತನ್ನು ಕೇಳಿ ಸ್ಯಾಮ್ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಫೋಟೋದಲ್ಲಿ ಇಷ್ಟು ಹಾಟ್ ಆಗಿ ಕಾಣಿಸಿಕೊಂಡಿರೋ ಸ್ಯಾಮ್ ಹಾಡಿನಲ್ಲಿ ಖಂಡಿತವಾಗಿಯೂ ಬೋಲ್ಡ್ ಬ್ಯೂಟಿಫುಲ್ ಆಗಿ ಇರ್ತಾರೆ ಅನ್ನೋ ಲೆಕ್ಕಾಚಾರ ಅಭಿಮಾನಿಗಳದ್ದು…

Leave a Reply

Your email address will not be published. Required fields are marked *