- January 6, 2022
ಜೇಮ್ಸ್ ತಂಡ ಕೊಡಲಿದೆ ಅಪ್ಪು ಫ್ಯಾನ್ಸ್ ಗೆ ಬಿಗ್ ಸರ್ ಪ್ರೈಸ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ..ಜೇಮ್ಸ್ ಸಿನಿಮಾ ಬಗ್ಗೆ ಆರಂಭದಿಂದಲೂ ಸಾಕಷ್ಟು ಕುತೂಹಲಗಳು ಹುಟ್ಟುಕೊಂಡಿದ್ದು.. ಸದ್ಯ ಅಪ್ಪು ಅಭಿನಯದ ಕಡೆಯ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾತುರದಿಂದ ಕಾದಿದ್ದಾರೆ…ಹಾಡುಗಳನ್ನು ಹೊರತುಪಡಿಸಿದಂತೆ ಮಿಕ್ಕೆಲ್ಲಾ ಚಿತ್ರೀಕರಣ ಕಂಪ್ಲೀಟ್ ಆಗಿದ್ದು ಸದ್ಯ ಸಿನಿಮಾತಂಡ ಗಣರಾಜ್ಯೋತ್ಸವ ದಿನದಂದು ಅಪ್ಪು ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ನೀಡಲು ನಿರ್ಧಾರ ಮಾಡಿದೆ ..

ಹೌದು ಗಣರಾಜ್ಯೋತ್ಸವ ದಿನದಂದು ಜೇಮ್ಸ್ ಚಿತ್ರದ ವಿಶೇಷವಾದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದ್ದು ಜನವರಿ ಇಪ್ಪತ್ತಾರರಂದು ಜೇಮ್ಸ್ ಚಿತ್ರದ ಸ್ಪೆಷಲ್ ಪೋಸ್ಟರ್ ರಿಲೀಸ್ ಆಗಲಿದೆ …ಮಾರ್ಚ್ ಹದಿನೇಳು ರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬ ಆಗಿರುವ ಕಾರಣ ಅಂದೆ ಜೇಮ್ಸ್ ಸಿನಿಮಾವನ್ನ ಬಿಡುಗಡೆ ಮಾಡಲು ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗುತ್ತಿದೆ….ಚಿತ್ರಕ್ಕೆ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಿದ್ದು, ಪ್ರಿಯಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ…
