- February 4, 2022
ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾರೆ ಪವರ್ ಸ್ಟಾರ್ ಪುನೀತ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳನ್ನ ಅಗಲಿ 3ತಿಂಗಳು ಕಳೆದಿವೆ… ಆದರೆ ಇಂದಿಗೂ ಕೂಡ ಅಭಿಮಾನಿಗಳು ಅವರು ತಮ್ಮ ಜೊತೆಯಲ್ಲೇ ಇದ್ದಾರೆ ಎನ್ನುವಂತೆಯೇ ಇದ್ದಾರೆ….
ಪುನೀತ್ ದೈಹಿಕವಾಗಿ ದೂರವಾದರೂ ಕೂಡ ಮಾನಿಸಿಕವಾಗಿ ಎಲ್ಲರ ಮನಸ್ಸಿನಲ್ಲಿ ಉಳಿದು ಬಿಟ್ಟಿದ್ದಾರೆ… 3ತಿಂಗಳಾದರೂ ಕೂಡ ಪ್ರತಿದಿನ ಪ್ರತಿಕ್ಷಣ ಅವರ ಅಭಿಮಾನಿಗಳು ಅವರ ಜಪವನ್ನೇ ಮಾಡುತ್ತಿದ್ದಾರೆ… ಅದರಂತೆಯ ಸದ್ಯ ಅಪ್ಪು ಅಭಿನಯದ ಜೇಮ್ಸ್ ಸಿನಿಮಾದ ಸ್ಟಿಲ್ ಒಂದು ಸಖತ್ ವೈರಲ್ ಆಗುತ್ತಿದೆ…

ಹೌದು ಪುನೀತ್ ಜೇಮ್ಸ್ ಸಿನಿಮಾದಲ್ಲಿ ಮಿಲಿಟರಿ ಆಫೀಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ…ಈಗಾಗಲೇ ಪೋಸ್ಟರ್ ಮೂಲಕ ಚಿತ್ರತಂಡ ಈ ವಿಚಾರವನ್ನು ರಿವೀಲ್ ಮಾಡಿದೆ… ಆದ್ರೆ ಇತ್ತೀಚೆಗಷ್ಟೆ ಪುನೀತ್ ಕಾಶ್ಮೀರದ ಚಿತ್ರೀಕರಣದಲ್ಲಿ ಭಾಗಿ ಯಾದಾಗ ತೆಗೆದ ಫೋಟೋ ಫೋಟೋ ಒಂದು ವೈರಲ್ ಆಗಿದ್ದು ಎಲ್ಲೆಡೆ ಮೆಚ್ಚುಗೆ ಗಳಿಸುತ್ತಿದೆ…
ಇನ್ನು ಜೇಮ್ಸ್ ಸಿನಿಮಾವನ್ನ ಚೇತನ್ ಕುಮಾರ್ ನಿರ್ದೇಶನ ಮಾಡಿದ್ದು …ವಿಜಯ್ ಕೊಂಡ ನಿರ್ಮಾಣ ಮಾಡಿದ್ದಾರೆ…ಪ್ರಿಯಾ ಆನಂದ್ ಪುನೀತ್ ಜೋಡಿಯಾಗಿ ನಟಿಸಿದ್ದಾರೆ ..
ಸಿನಿಮಾದ ಅರ್ಧದಷ್ಟು ಭಾಗ ಕಾಶ್ಮೀರದ ಗಡಿ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ…