- December 13, 2021
ಬಿಗ್ ಸೀಕ್ರೆಟ್ ರಿವೀಲ್: ‘ಲಕ್ಕಿ ಮ್ಯಾನ್’ ಚಿತ್ರದಲ್ಲಿ ಅಪ್ಪು ಪಾತ್ರಕ್ಕೆ ಅವರದ್ದೇ ವಾಯ್ಸ್… ಅದು ಹೇಗೆ ಗೊತ್ತಾ..!???

ನಾವೆಲ್ಲರೂ ತಿಳಿದಿರುವಂತೆ ಅಪ್ಪು ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಸಿನಿಮಾ ‘ಲಕ್ಕಿಮ್ಯಾನ್’. ಈ ಚಿತ್ರದ ನಾಯಕ ನಟ ಡಾರ್ಲಿಂಗ್ ಕೃಷ್ಣ.

ಈ ಚಿತ್ರ ಅಪ್ಪು ಅಭಿನಯಿಸಿರುವ ಕೊನೆಯ ಚಿತ್ರ. ಅಪ್ಪು ನಾಯಕ ನಟನಾಗಿ ಅಭಿನಯಿಸಿರುವ ಕೊನೆಯ ಚಿತ್ರ ಜೇಮ್ಸ್ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ.

ಲಕ್ಕಿಮ್ಯಾನ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಪ್ಪು ಬಹಳಷ್ಟು ಆಸೆ ಕನಸುಗಳು ಕೈಗೂಡುವ ಮುನ್ನವೇ ನಮ್ಮನ್ನು ಅಗಲಿದರು. ಆ ನೋವಿನಿಂದ ಕನ್ನಡ ಜನತೆ ಎಂದೂ ಹೊರಬರಲು ಸಾಧ್ಯವಿಲ್ಲ.
ಲಕ್ಕಿಮ್ಯಾನ್ ಚಿತ್ರದ ಅಪ್ಪು ಅವರ ಪಾತ್ರದ ಡಬ್ಬಿಂಗ್ ಮುಂಚೆಯೇ ಅವರಿಲ್ಲವಾದರು. ಕೊಂಚ ಸಮಾಧಾನಕರ ವಿಷಯ ಏನೆಂದರೆ ಅಪ್ಪು ಅವರ ವಾಯ್ಸ್ ಅನ್ನೇ ಡಬ್ಬಿಂಗ್ ಮಾಡಲಾಗುತ್ತಿದೆ ಎಂದು ಚಿತ್ರತಂಡ ಹೇಳಿದೆ.

ಇದು ಹೇಗೆ ಅಪ್ಪು ಇಲ್ಲದಿರುವಾಗ ಎಂಬ ಪ್ರಶ್ನೆಗೆ ಉತ್ತರ ಚಿತ್ರ ತಂಡ ನೀಡಿದೆ. ಅಪ್ಪು ಅವರು ಲಕ್ಕಿಮ್ಯಾನ್ ಚಿತ್ರದಲ್ಲಿ ಅಭಿನಯಿಸಿರಿವ ಬಹತೇಕ ಚಿತ್ರೀಕರಣವನ್ನು ಇನ್ಡೋರ್ನಲ್ಲಿ ಮಾಡಿದ್ದಾರೆ. ಇದರಿಂದ ಅಪ್ಪು ಅವರ ವಾಯ್ಸ್ ಸ್ಪಷ್ಟವಾಗಿ ರೆಕಾರ್ಡ್ ಆಗಿದ್ದು. ಉಳಿದ ಡಬ್ಬಿಂಗ್ ಕೆಲಸಕ್ಕೆ ಇದೇ ಅಪ್ಪು ಅವರ ವಾಯ್ಸ್ ಅನ್ನು ಬಳಸಿ ಕೊನೆಯ ಬಾರಿಗೆ ಅಭಿಮಾನಿಗಳು ತೆರೆ ಮೇಲೆ ಕೇಳಬಹದಾಗಿದೆ. ಇದು ಬಹಳ ನೋವಿನ ಹಾಗೂ ಕೊಂಚ ಸಮಾಧಾನ ನೀಡುವ ಸಂಗತಿ.
ಈ ಚಿತ್ರವನ್ನು ಪ್ರಭುದೇವ ಅವರ ತಮ್ಮ ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಅಪ್ಪು ಪ್ರಭುದೇವ ಅವರೊಟ್ಟಿಗೆ ಸಕತ್ ಸ್ಟೆಪ್ಸ್ ಹಾಕಿದ್ದಾರೆ.

ಅಪ್ಪು ನೋಡಲು ಜೇಮ್ಸ್ ಹಾಗೂ ಲಕ್ಕಿಮ್ಯಾನ್ ಚಿತ್ರಕ್ಕಾಗಿ ಇಡೀ ಕರುನಾಡು ಕಾತುರದಿಂದ ಕಾಯುತ್ತಿದೆ.