• March 4, 2022

ನಟಿ ಸಂಜನಾಗೆ ಅಶ್ಲೀಲ ಮೆಸೇಜ್ ಮಾಡಿ ಕಂಬಿ ಎಣಿಸುತ್ತಿರುವ ವಿಐಪಿ ಪುತ್ರ

ನಟಿ ಸಂಜನಾಗೆ ಅಶ್ಲೀಲ ಮೆಸೇಜ್ ಮಾಡಿ ಕಂಬಿ ಎಣಿಸುತ್ತಿರುವ ವಿಐಪಿ ಪುತ್ರ

ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ನಟಿ ಸಂಜನಾ ಗರ್ಲಾನಿ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ… ಸಿನಿಮಾಗಳಲ್ಲಿ ಅಭಿನಯ ಮಾಡದೇ ಇದ್ದರೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ರೀತಿಯಲ್ಲಿ ಅಭಿಮಾನಿಗಳ ಮನೋರಂಜಿಸುತ್ತಿದ್ದಾರೆ …

ಸದ್ಯ ಗರ್ಭಿಣಿಯಾಗಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಸಂಜನಾ ಗರ್ಲಾನಿಯವರಿಗೆ ಪ್ರಖ್ಯಾತ ಕೊರಿಯಾಗ್ರಾಫರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರ ಪುತ್ರ ಆ್ಯಡಮ್ ಬಿದ್ದಪ್ಪ ಅವರು ಅಶ್ಲೀಲವಾಗಿ ಮೆಸೇಜ್ ಗಳನ್ನು ಕಳುಹಿಸಿ ನಿಂದಿಸಿರುವ ಆರೋಪದಲ್ಲಿ ಅವರನ್ನು ಇಂದಿರಾ ನಗರದ ಪೊಲೀಸರು ಬಂಧಿಸಿದ್ದಾರೆ..

ಇಂದಿರಾ ನಗರದ ಪೊಲೀಸ್ ಠಾಣೆಗೆ ದೂರು ದಾಖಲಿಸುವಂತಹ ಸಂಜನಾ ಅವರು ಸುಮಾರು 2ಗಂಟೆಗಳ ಕಾಲ ಅಶ್ಲೀಲ ಮೆಸೇಜ್ ಕಳುಹಿಸಿ ನಿಂದಿಸಿದ್ದಾನೆ ‌…ಹೀಗಾಗಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ… ಅಲ್ಲದೆ ನಟಿ ಸಂಜನಾ ಗರ್ಲಾನಿ ಹಾಗೂ ಆರೋಪಿ ಹಿಂದಿನಿಂದ ಸ್ನೇಹಿತರಾಗಿದ್ದು ದೂರಿನ ಜತೆ ಕೆಲವು ದಾಖಲೆಗಳನ್ನು ನೀಡಿದ್ದಾರೆ… ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಇಂದಿರಾನಗರ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ…. ಇನ್ನು ವಿಚಾರಣೆ ವೇಳೆ ನಾನು ಮೆಸೇಜ್ ಕಳಿಸಿಲ್ಲ ಎಂದು ಆರೋಪಿ ಹೇಳಿದ್ದು ಪೋಲಿಸರು ಮತ್ತಷ್ಟು ತನಿಖೆಯನ್ನು ಕೈಗೊಂಡಿದ್ದಾರೆ..

ಇನ್ನು ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡಿ ಪಬ್ಲಿಸಿಟಿ ಪಡೆದುಕೊಳ್ಳಲು ನನಗೆ ಇಷ್ಟವಿಲ್ಲ ಎಂದು ಸಂಜನಾ ಮಾಧ್ಯಮದವರಿಗೆ ತಿಳಿಸಿದ್ದಾರೆ

Leave a Reply

Your email address will not be published. Required fields are marked *