• March 9, 2022

ರಿಷಭ್ ಶೆಟ್ಟರ ಖುಷಿಗೆ ಕಾರಣ ಇದೇ..

ರಿಷಭ್ ಶೆಟ್ಟರ ಖುಷಿಗೆ ಕಾರಣ ಇದೇ..

ಕೇರಳದ ತಿರುವನಂತಪುರದಲ್ಲಿ ಈಗ ಹಬ್ಬದ ಸಂಭ್ರಮ. ಅಸರಲ್ಲೂತ ಸಿನಿಪ್ರಿಯರ ಸಂಭ್ರಮವಂತೂ ಕೇಳುವುದೇ ಬೇಡ. ಯಾಕೆಂದರೆ ಕೇರಳ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಇದೇ ಮಾರ್ಚ್ 18 ರಿಂದ 25ರ ತನಕ ತಿರುವನಂತಪುರದಲ್ಲಿ ನಡೆಯಲಿದೆ. ಸಂತಸದ ವಿಚಾರವೆಂದರೆ ಆ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡ ಸಿನಿಮಾ ಪ್ರದರ್ಶನಗೊಳ್ಳಲಿದೆ.

ಆ ಸಿನಿಮಾ ಬೇರಾವುದು ಅಲ್ಲ ಪೆದ್ರೊ. ರಿಷಬ್ ಶೆಟ್ಟಿ ನಿರ್ಮಾಣದ, ನಟೇಶ್ ಹೆಗಡೆ ನಿರ್ದೇಶನದ ಪೆದ್ರೊ ಸಿನಿಮಾ ಕೇರಳ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದು ವರ್ಲ್ಡ್ ಸಿನಿಮಾ ಎನ್ನುವ ವಿಭಾಗದಡಿ ಇದು ಪ್ರದರ್ಶನಗೊಳ್ಳಲಿದೆ.

ಈ ಸಂತಸದ ವಿಚಾರವನ್ನು ಸ್ವತಃ ರಿಷಬ್ ಶೆಟ್ಟಿ ಅವರೇ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. ” ಪೆದ್ರೊ – ಕೇರಳ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವರ್ಲ್ಡ್ ಸಿನಿಮಾ ವಿಭಾಗದಲ್ಲಿ ಪ್ರದರ್ಶನವಾಗಲಿದೆ. ಎಲ್ಲರೂ ಚಲನಚಿತ್ರೋತ್ಸವಕ್ಕೆ ಬನ್ನಿ. ನಾವೆಲ್ಲಾ ಜೊತೆಯಾಗಿ ಸಂಭ್ರಮಿಸೋಣ” ಎಂದು ಬರೆದುಕೊಂಡಿದ್ದಾರೆ.

ಉತ್ತರ ಕರ್ನಾಟಕದ ಯಲ್ಲಾಪುರದ ನಟೇಶ್ ಹೆಗಡೆ ಅವರ ನಿರ್ದೇಶನದ ಮೊದಲ ಸಿನಿಮಾ ಇದಾಗಿದೆ. ಪೆದ್ರೊ ಮಧ್ಯಮ ವರ್ಗದ ಎಲೆಕ್ಟ್ರಿಷಿಯನ್ ಒಬ್ಬನ ಕಥೆಯಾಗಿದೆ. ತನ್ನ ಪ್ರೀತಿಯ ನಾಯಿಯನ್ನು ಕೊಂದಂತಹ ಹಂದಿಯನ್ನು ಹೊಡೆಯಲು ಹೋದಾಗ ಡೆನು ಅನಾಹುತವಾಯಿತು ಎಂಬುದನ್ನು ಈ ಚಿತ್ರ ನೀಡಲಿದೆ. ರಾಜ್ ಬಿ ಶೆಟ್ಟಿ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಸಿನಿಮಾದ ಪ್ರಮುಖ ಪಾತ್ರದಲ್ಲಿ ನಿರ್ದೇಶಕ ನಟೇಶ್ ಹೆಗಡೆ ಅವರ ತಂದೆ ಗೋಪಾಲಕೃಷ್ಣ ಹೆಗಡೆ ಅಭಿನಯಿಸುತ್ತಿದ್ದಾರೆ.

Leave a Reply

Your email address will not be published. Required fields are marked *