• January 9, 2022

ಚೊಚ್ಚಲ ಸಿನಿಮಾ ಶೂಟಿಂಗ್ ಮುಗಿಸಿದ ಪಾರು ಖ್ಯಾತಿಯ ಮೋಕ್ಷಿತ

ಚೊಚ್ಚಲ ಸಿನಿಮಾ ಶೂಟಿಂಗ್ ಮುಗಿಸಿದ ಪಾರು ಖ್ಯಾತಿಯ ಮೋಕ್ಷಿತ

ಬಾಲಕೃಷ್ಣ ಕೆ.ಆರ್ ನಿರ್ಮಾಣದ, ರಾಜು ಕುಣಿಗಲ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ, ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವಿರುವ “ನಿರ್ಭಯ 2” ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಈ ಸಿನಿಮಾದ ಮೂಲಕ ಜೀ ಕನ್ನಡದಲ್ಲಿ ಪ್ರಸಾರವಾಗುವ ಪಾರು ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಸ್ಯಾಂಡಲ್ ವುಡ್ ಗೆ ಅಧಿಕೃತವಾಗಿ ನಾಯಕಿಯಾಗಿ ಎಂಟ್ರಿಕೊಡುತ್ತಿದ್ದಾರೆ…

ಸದ್ಯ ಟಾಕಿ ಪೋರ್ಷನ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಸಿನಿಮಾದ ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿಸಿಕೊಂಡಿದೆ …ಸದ್ಯದಲ್ಲೇ ಹಾಡುಗಳ ಚಿತ್ರೀಕರಣವನ್ನು ಆರಂಭವಾಗಲಿದೆ.

ಡಾ|ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಹಾಗೂ ಸಂತೋಷ್ ನಾಯಕ್ ಈ ಚಿತ್ರದ ಹಾಡುಗಳನ್ನು ರಚಿಸಿದ್ದು, ಆಕಾಶಪರ್ವ ಸಂಗೀತ ನೀಡಿದ್ದಾರೆ. ರಂಗ್ ಮಂಜು ಸಂಭಾಷಣೆ ಬರೆದಿದ್ದಾರೆ. ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣ ಹಾಗೂ ಮಧು ತುಂಬಕೆರೆ ಸಂಕಲನ “ನಿರ್ಭಯ 2” ಚಿತ್ರಕ್ಕಿದೆ.

“ಪಾರು” ಖ್ಯಾತಿಯ ಮೋಕ್ಷಿತ ಪೈ, ಸೇರಿದಂತೆ ಅರ್ಜುನ್ ಕೃಷ್ಣ, ಹರೀಶ್ ಹೆಚ್ ಆರ್, ಕುಸುಮ, ರಾಧಾ ರಾಮಚಂದ್ರ, ಅಶೋಕ್, ಗಣೇಶ್ ರಾವ್, ಹನುಮಂತೇ ಗೌಡ್ರು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Leave a Reply

Your email address will not be published. Required fields are marked *