- February 6, 2022
ಮಗಳಿಗಾಗಿ ಸಾಂಗ್ ರೈಟರ್ ಆದ ಸತೀಶ್ ನೀನಾಸಂ

ನಟ ಸತೀಶ್ ನೀನಾಸಂ ಇತ್ತೀಚೆಗಷ್ಟೇ ತಮ್ಮ ಮಗಳ ಫೋಟೋವನ್ನು ರಿವೀಲ್ ಮಾಡಿ ನನ್ನ ಮಗಳಿಗೆ 5ವರ್ಷವಾಗಿದೆ …ಅವಳ ಪ್ರೈವೆಸಿಗಾಗಿ ಇಷ್ಟು ದಿನ ಅವಳ ಫೋಟೋ ವನ್ನ ಹಂಚಿಕೊಂಡಿರಲಿಲ್ಲ ಎಂದು ಸಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದರು… ಈಗ ಅದೇ ಮಗಳಿಗಾಗಿ ಸತೀಶ್ ಸಾಂಗ್ ರೈಟರ್ರಾಗಿದ್ದಾರೆ..
ಹೌದು….ನಟ ಸತೀಶ್ ನೀನಾಸಂ ಅವರ ಮಗಳನ್ನ ಅಭಿಮಾನಿಗಳಿಗೆ ಪರಿಚಯ ಮಾಡಲು ವೀಡಿಯೋ ಆಲ್ಬಂ ಸಾಂಗ್ ರೆಡಿ ಮಾಡಿದ್ದಾರೆ… ಈ ಹಾಡಿನ ಮೂಲಕ ತಮ್ಮ ಅಭಿಮಾನಿಗಳಿಗೆ ತನ್ನ ಮಗಳಾದ ಮನಸ್ವಿತಳನ್ನ ಪರಿಚಯ ಮಾಡಿಸಲಿದ್ದಾರೆ….ಈ ಹಾಡನ್ನ ಖುದ್ದು ಸತೀಶ್ ಅವರೇ ಬರೆದು ಹಾಡಿದ್ದು.. ಇದರ ಜೊತೆಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ..

ಈ ಹಾಡು ಸತೀಶ್ ಆಡಿಯೋ ಹೌಸ್ ನಲ್ಲಿ ರಿಲೀಸ್ ಆಗಲಿದ್ದು ಈ ಮೂಲಕ ಸತೀಶ್ ತಮ್ಮ ಸ್ವಂತ ಆಡಿಯೋ ಸಂಸ್ಥೆ ಹೊಂದಲಿದ್ದಾರೆ…ಇನ್ನು ಈ ಹಾಡಿಗೆ ಅಶರೀರವಾಣಿ ಎಂದು ಹೆಸರಿಟ್ಟಿದ್ದಾರೆ…