- January 14, 2022
ನಮ್ಮಮ್ಮ ಸೂಪರ್ ಸ್ಟಾರ್ ಖ್ಯಾತಿಯ ಮಗು ಭೀಕರ ಅಪಘಾತದಲ್ಲಿ ಸಾವು !

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಖ್ಯಾತಿಯ ಸಮನ್ವಿ ಇಂದು ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ…
ಕಿರುತೆರೆ ನಟಿ ಅಮೃತಾ ನಾಯ್ಡು ಅವರ ಎರಡನೇ ಮಗಳಾಗಿದ್ದ ಸಮನ್ವಿಗೆ 6ವರ್ಷ ವಯಸ್ಸಾಗಿತ್ತು.. ತನ್ನ ಮುದ್ದಾದ ಮಾತು ಹಾಗೂ ಅಭಿನಯದಿಂದ ಹಲವಾರು ಪ್ರೇಕ್ಷಕರ ಗಮನ ಸೆಳೆದಿದ್ದ ಸಮನ್ವಿ ಇಂದು ಹಸುನೀಗಿದ್ದಾಳೆ…

ಬೆಂಗಳೂರಿನ ಕೋಣನಕುಂಟೆ ಕ್ರಾಸ್ ಬಳಿ ಅಪಘಾತದಲ್ಲಿ ಸಮನ್ವಿ ಸಾವನ್ನಪ್ಪಿದ್ದಾಳೆ.. ತಾಯಿಯ ಜತೆ ದ್ವಿಚಕ್ರ ವಾಹನದಲ್ಲಿ ಪ್ರಯಾಣ ಮಾಡುವಾಗ ಟಿಪ್ಪರ್ ಹರಿದು ಸಮನ್ವಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ತಾಯಿ ಅಮೃತಾ ಗಂಭೀರವಾಗಿ ಗಾಯಗೊಂಡಿದ್ದಾರೆ …ಈ ವಿಚಾರ ಅಮೃತ ಕುಟುಂಬಸ್ಥರಿಗೆ ಹಾಗೂ ಇಡೀ ಕಲರ್ಸ್ ಕನ್ನಡ ತಂಡಕ್ಕೆ ಆಘಾತವನ್ನುಂಟು ಮಾಡಿದೆ…