- January 2, 2022
ಬಿಡದ ಕರ್ಮ-ಕಾಡುವ ರಚ್ಚು

ನಟಿ ರಚಿತಾ ರಾಮ್ ಹಾಗೂ ಅಜಯ್ ರಾವ್ ಅಭಿನಯದ ಹೊಸಿನಿಮಾ ಹೊಸ ವರ್ಷದ ವಿಶೇಷವಾಗಿ ತೆರೆಕಂಡಿದೆ ಈಗಾಗಲೇ ಟೀಸರ್ ಮತ್ತು ಟ್ರೇಲರ್ ನಲ್ಲಿ ಸಾಕಷ್ಟು ಕುತೂಹಲದ ದೃಶ್ಯದಿಂದಲೇ ಪ್ರೇಕ್ಷಕರ ಗಮನ ಸೆಳೆದಿದ್ದರು ಈ ಚಿತ್ರಕ್ಕೆ ಉತ್ತಮ ಓಪನ್ನಿಂಗ್ ಕೂಡ ಸಿಕ್ಕಿದೆ ..
ಕರ್ಮ ರಿಟರ್ನ್ಸ್ ಎನ್ನುವ ಎಳೆಯನ್ನೇ ಆಧಾರವಾಗಿಟ್ಟುಕೊಂಡು ಸಿನಿಮಾ ಕಥೆಯನ್ನು ಎಣೆಯಲಾಗಿದೆ ತಾವು ಏನೇ ತಪ್ಪು ಮಾಡಿದರೂ ಅದು ತಮಗೆ ಮತ್ತೆ ಟನ್ ಆಗುತ್ತೆ ಅನ್ನೋದು
ಲವ್, ರೊಮ್ಯಾನ್ಸ್, ಕ್ರೈಂ, ಆ್ಯಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಹೀಗೆ ಅನೇಕ ತಿರುವುಗಳ ನಡುವೆ “ರಚ್ಚು’ ಕಥೆಯ ಜೊತೆ ಕರ್ಮದ ಎಳೆಯೊಂದು

ಸಿನಿಮಾದ ಸಂಭಾಷಣೆ ಹಾಗೂ ಕಥೆ ಇನ್ನಷ್ಟು ಗಟ್ಟಿಯಾಗಿದ್ದಾರೆ ಚಿತ್ರ ಮತ್ತಷ್ಟು ವೇಗವಾಗಿ ಓಡುತ್ತಿತ್ತು ಎಂಬುದು ಪ್ರೇಕ್ಷಕರ ಅಭಿಪ್ರಾಯ ಟೈಟಲ್ ಹೇಳುವಂತೆ ಚಿತ್ರ ರಚ್ಚು ಸುತ್ತಲೇ ಸಿನಿಮಾ ಸ್ಟೋರಿ ಸುತ್ತುತ್ತದೆ…ಇನ್ನು ಸಿನಿಮಾ ಮುಗಿಸಿ ಹೊರಬಂದ ಮೇಲೆಯೂ ರಚ್ಚು ಬಿಡದೇ ಕಾಡುತ್ತಾರೆ..ಅಜು್ ಎಂದಿನಂತೆ ಅಭಿನಯದಲ್ಲಿ ಫುಲ್ ಮಾರ್ಕ್ಸ್ ಪಡೆದಿದ್ದಾರೆ…

ಸಿನಿಮಾಗೆ ಶಶಾಂಕ್ ಕಥೆ ಚಿತ್ರಕಥೆ ಬರೆದಿದ್ದು ಚಿತ್ರದುದ್ದಕ್ಕೂ ಮತ್ತಷ್ಟು ಇಂಟ್ರೆಸ್ಟಿಂಗ್ ಎನ್ನಿಸೋ ಟ್ವಿಸ್ಟ್ ಅಂಡ್ ಟರ್ನ್ ಗಳಿದ್ದಿದ್ದರೆ ನೋಡುಗರಿಗೂ ಮಜಾ ಸಿಕ್ತಿತ್ತು..ಮಣಿಕಂತ್ ಮ್ಯೂಸಿಕ್ .ಶ್ರೀ ಕ್ರೇಜಿ ಮೈಂಡ್ ಕ್ಯಾಮೆರಾ ವರ್ಕ್ ಕೆಲಸ ದೃಶ್ಯಗಳಲ್ಲಿ ವಾವ್ಹ್ ಎನ್ನಿಸುತ್ತೆ…ನಟ ಅರು ಗೌಡ . ಅಚ್ಯುತ್ ಕುಮಾರ್, ಬಿ. ಸುರೇಶ ಒಂದೆರಡು ದೃಶ್ಯಗಳಿಗಷ್ಟೇ ಸೀಮಿತವಾಗಿದ್ದು ಟ್ರೇಲರ್ ನಲ್ಲಿ ಕುತೂಹಲ ಮೂಡಿಸಿದ್ದ ನಿರ್ದೇಶಕ ರಾಘು ಶಿವಮೊಗ್ಗ ಕಡಿಮೆ ಅವಧಿಯಲ್ಲಿ ಕಾಣಿಸಿಕೊಂಡರೂ, ಕಥೆಗೆ ಹೆಚ್ಚು ಟ್ವಿಸ್ಟ್ ನೀಡುತ್ತಾರೆ. ಅರವಿಂದ್ ರಾವ್ ಖಡಕ್ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ….
