• December 18, 2021

ಮದುವೆ ಆದ ಮೂರೇ ದಿನಕ್ಕೆ ಅಡುಗೆ ಮನೆ ಸೇರಿದ ಕತ್ರಿನಾ

ಮದುವೆ ಆದ ಮೂರೇ ದಿನಕ್ಕೆ ಅಡುಗೆ ಮನೆ ಸೇರಿದ ಕತ್ರಿನಾ

ಬಿಟೌನ್ ನಟಿ ಕತ್ರಿನಾ ಕೈಫ್ ಇತ್ತೀಚೆಗಷ್ಟೆ ವಿಕ್ಕಿ ಕೌಶಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು… ಮದುವೆ ಆದ ಕೆಲವೇ ದಿನಗಳಲ್ಲಿ ನಟಿ ಕತ್ರಿನಾ ಕೈಫ್ ಅಡುಗೆ ಮಾಡಲು ಕಲಿತಿದ್ದಾರೆ ..ಸದ್ಯ ಅಡುಗೆ ಮನೆಯಲ್ಲಿ ಕತ್ರಿನಾ ಬ್ಯುಸಿ ಆಗಿದ್ದಾರೆ ಅಂದ್ರೆ ನೀವು ನಂಬಲೇ‌ಬೇಕು ಇದನ್ನ ನಾವ್ ಹೇಳ್ತಿಲ್ಲ ಅವ್ರ ಪತಿ ವಿಕ್ಕಿ ಕೌಶಲ್ ಅವ್ರೇ ಹೇಳ್ತಿದ್ದಾರೆ….

ಹೌದು… ಇತ್ತೀಚೆಗಷ್ಟೆ ಕತ್ರಿನಾ ಕೈಫ್ ತನ್ನ ಪತಿ ವಿಕ್ಕಿ ಕೌಶಲ್ ಅವ್ರಿಗಾಗಿ ಹಲ್ವಾ ಮಾಡಿ ಬಡಿಸಿದ್ದಾರೆ… ಈ ವಿಚಾರ ವನ್ನು ವಿಕ್ಕಿ ಕೌಶಲ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ ..

ನನ್ನ ಜೀವನದಲ್ಲಿ ತಿಂದಂಥ ಅತ್ಯಂತ ಅಮೂಲ್ಯವಾದ ಹಲ್ವಾ ಇದು ಎಂದು ವಿಕ್ಕಿ ಕೌಶಲ್ ಸಂತಸ ವ್ಯಕ್ತಪಡಿಸಿದ್ದಾರೆ …..ಅದರ ಜತೆಗೆ ನಟಿ ಕತ್ರಿನಾ ಕೈಫ್ ಕೂಡ ನಾನೇ ಮಾಡಿದ ಹಲ್ವಾ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಂತಸದಿಂದ ಫೋಟೋವನ್ನು ಶೇರ್ ಮಾಡಿದ್ದಾರೆ …

ಸದ್ಯ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಹನಿಮೂನ್ ಮುಗಿಸಿ ಮುಂಬೈಗೆ ವಾಪಸಾಗಿದ್ದಾರೆ…ತಮ್ಮ ಹೊಸ‌ಮನೆಯ ಗೃಹ ಪ್ರವೇಶ ಮಾಡಿರೋ ದಂಪತಿಗಳು ತಮ್ಮ ತಮ್ಮ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಆಗಲಿದ್ದಾರೆ…

Leave a Reply

Your email address will not be published. Required fields are marked *