- December 2, 2021
ನಟಿ ಅಮೂಲ್ಯ ದಂಪತಿ ಬದುಕಲ್ಲಿ ಹೊಸ ಅತಿಥಿಯ ಆಗಮನ.!
ಬಾಲನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮ ಚಾಪು ಮೂಡಿಸಿ ಬೆಳೆದ ನಂತರ ನಾಯಕನಟಿಯಾಗಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ಚೆಲುವಿನ ಚಿತ್ತಾರದ ಬೆಡಗಿ ಅಮೂಲ್ಯ ಅವರು ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾಗಲೇ ಜಗದೀಶ್ ಅವರ ಕೈಹಿಡಿದರು.

ಮದುವೆಯ ನಂತರ ಅವರು ಚಿತ್ರರಂಗದಿಂದ ದೂರ ಉಳಿದಿದ್ದರು. ಮುಗುಳುನಗೆ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದರು.
ಗಣೇಶ್,ಯಶ್,ಲವ್ಲಿ ಸ್ಟಾರ್ ಪ್ರೇಮ್,ಕೃಷ್ಣ ಅಜಯ್ ರಾವ್, ದುನಿಯಾ ವಿಜಯ್ ಮುಂತಾದ ಸ್ಟಾರ್ ಕಲಾವಿದರ ಜೊತೆ ನಾಯಕಿಯಾಗಿ ಅಭಿನಯಿಸಿ ಕನ್ನಡಿಗರ ನೆಚ್ಚಿನ ನಟಿಯಾಗಿ ಮನಸ್ಸಿನಲ್ಲಿ ಉಳಿದಿದ್ದಾರೆ.
2017 ರಲ್ಲಿ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ಅಮೂಲ್ಯ ಇದೀಗ ಹೊಸ ಸುದ್ದಿ ನೀಡಿದ್ದಾರೆ. ಹೌದು ನಟಿ ಅಮೂಲ್ಯ ತಾಯಿಯಾಗುತ್ತಿರುವುದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಭಿನ್ನ ರೀತಿಯಲ್ಲಿ ಪೋಟೋ ಶೂಟ್ ಮಾಡಿಸುವುದರ ಮೂಲಕ ಖುಷಿ ವಿಷಯವನ್ನು ಹಂಚಿಕೊಂಡು ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ.