• December 1, 2021

ಭಟ್ರ ಜೊತೆ ಪದವಿಪೂರ್ವ ಕಾಲೇಜಿನಲ್ಲಿ ದಿವ್ಯ ಉರುಡುಗ.!

ಭಟ್ರ ಜೊತೆ ಪದವಿಪೂರ್ವ ಕಾಲೇಜಿನಲ್ಲಿ ದಿವ್ಯ ಉರುಡುಗ.!

ಹೌದು ಬಿಗ್ ಬಾಸ್ ಖ್ಯಾತಿಯ ನಟಿ ದಿವ್ಯ ಉರುಡುಗ ಅವರು ಭಟ್ರಸಿನಿಮಾ ಒಂದರಲ್ಲಿ ನಟಿಸಲು ಆಫರ್ ಗಿಟ್ಟಿಸಿಕೊಂಡಿದ್ದಾರೆ.

ಈ ಹಿಂದೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ದಿವ್ಯಗೆ ಬಿಗ್ ಬಾಸ್ ಖ್ಯಾತಿಯ ನಂತರ ಆಫರ್ ಗಳು ಹೆಚ್ಚಾಗಿವೆ. ಆದರೆ ದಿವ್ಯ ಆಫರ್ ಗಳಲ್ಲಿ ಚ್ಯೂಸಿ ಆಗಿದ್ದಾರೆ.

ಇದೀಗ ಅವರು ನಿರ್ದೇಶಕ ಯೋಗರಾಜ್ ಭಟ್ ರ ಸಿನಿಮಾ ಒಂದರಲ್ಲಿ ನಟಿಸೋ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

“ಪದವಿಪೂರ್ವ” ಸಿನಿಮಾದಲ್ಲಿ ದಿವ್ಯ ಅತಿಥಿ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಹರಿಪ್ರಸಾದ್ ಜಯಣ್ಣ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಚಿತ್ರದಲ್ಲಿ ಹೊಸ ಯುವ ಪ್ರತಿಭೆ ಪೃಥ್ವಿ ಶಾಮನೂರು ನಾಯಕನಾಗಿ ಹಾಗೂ ಅಂಜಲಿ ಅನೀಶ್ ಮತ್ತು ಯಶಾ ಶಿವಕುಮಾರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಅಂತೂ ಯೋಗರಾಜ್ ಭಟ್ರ ಜೊತೆ ದಿವ್ಯ ಪದವಿಪೂರ್ವ ಶಿಕ್ಷಣ ಮುಗಿಸಲಿದ್ದಾರೆ.

All the best DU..