- January 16, 2022
ಒಟಿಟಿಯಲ್ಲಿ ದಾಖಲೆ ಬರೆದ ‘ಗರುಡ ಗಮನ ವೃಷಭ ವಾಹನ’

ಕಳೆದ ವರ್ಷ ಪ್ರೇಕ್ಷಕರ ಮನಗೆದ್ದ ಸಿನಿಮಾ ‘ಗರುಡ ಗಮನ ವೃಷಭ ವಾಹನ ಚಿತ್ರ …ರಾಜ್ ಬಿ. ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ರೌಡಿಸಂ ಲೋಕದ ಕಥೆ ಹೇಳಲಾಗಿದೆ. ನಿರ್ದೇಶನದ ಜತೆಗೆ ಪ್ರಮುಖ ಪಾತ್ರದಲ್ಲೂ ರಾಜ್ ಬಿ. ಶೆಟ್ಟಿ ನಟಿಸಿದ್ದಾರೆ. ಇನ್ನೊಂದು ಮುಖ್ಯ ಪಾತ್ರಕ್ಕೆ ರಿಷಬ್ ಶೆಟ್ಟಿ ಬಣ್ಣ ಹಚ್ಚಿದ್ದಾರೆ… ಸಿನಿಮಾ ಕನ್ನಡ ಚಿತ್ರರಂಗದಲ್ಲೇ ಬೇರೆಯದ್ದೇ ಫೀಲ್ ಕೊಟ್ಟಿತ್ತು. ಈ ಹಿಂದೆ ನೋಡಿರದ ರೀತಿಯಲ್ಲಿ ಈ ಸಿನಿಮಾ ಮಜಾ ಕೊಟ್ಟಿತ್ತು. ಒಳ್ಳೆ ಛಾಯಾಗ್ರಹಣ, ಅದ್ಭುತ ಹಿನ್ನೆಲೆ ಸಂಗೀತ, ಕಲಾವಿದರ ಅಭಿನಯ ಎಲ್ಲವೂ ಸಖತ್ ಕಿಕ್ ಕೊಟ್ಟಿತ್ತು.

ಕಳೆದ ನ.19ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ವಿಭಿನ್ನ ಕಥಾಹಂದರ ಹೊಂದಿದ್ದ ‘ಗರುಡ ಗಮನ ವೃಷಭ ವಾಹನ’ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.


‘ಹರಿ’ ಪಾತ್ರದಲ್ಲಿ ನಟ ರಿಷಬ್ ಶೆಟ್ಟಿ, ‘ಶಿವ’ ಎಂಬ ಪಾತ್ರದಲ್ಲಿ ರಾಜ್ ಪ್ರೇಕ್ಷಕರನ್ನು ಕರಾವಳಿಯ ರೌಡಿಸಂ ಲೋಕಕ್ಕೆ ಕರೆದೊಯ್ದಿದ್ದ ಈ ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ಜೀ5ನಲ್ಲಿ ಚಿತ್ರ ಬಿಡುಗಡೆಯಾಗಿತ್ತು.

ಜನವರಿ 13ರಂದು ಒಟಿಟಿಯಲ್ಲಿ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಿನಿಮಾ ಕೇವಲ ಮೂರು ದಿನಗಳಲ್ಲಿ ಬರೋಬ್ಬರಿ 8 ಕೋಟಿ ನಿಮಿಷ ವೀಕ್ಷಣೆ ಕಂಡಿದೆ.
