• March 5, 2022

ನಟಿ ದಿಶಾ ಮದನ್ ಸ್ಪೆಷಲ್ ವಿಡಿಯೋ…

ನಟಿ ದಿಶಾ ಮದನ್ ಸ್ಪೆಷಲ್ ವಿಡಿಯೋ…

ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿ ಮನರಂಜಿಸುವ ನಟಿ ದಿಶಾ ಮದನ್ ಸಿಹಿ ಸುದ್ದಿ ನೀಡಿದ್ದಾರೆ.‌ ಗರ್ಭಿಣಿಯಾಗಿದ್ದ ದಿಶಾ ಮದನ್ ಮಾರ್ಚ್ ಒಂದರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿರುವ ದಿಶಾ ಮದನ್ ಮುದ್ದು ಮಗಳ ಹೆಸರನ್ನು ಕೂಡಾ ಬಹಿರಂಗಗೊಳಿಸಿರುವುದು ವಿಶೇಷ.

ಮಗುವಿಗೆ ಜನ್ಮ ನೀಡುವ ಸಮಯ ಹತ್ತಿರವಿದ್ದಾಗಲೂ ಸ್ವತಃ ಕಾರ್ ಡ್ರೈವ್ ಮಾಡಿಕೊಂಡು ಹೋಗಿರುವ ದಿಶಾ ಈ ಬಗ್ಗೆ ವಿಶೇಷ ವಿಡಿಯೋ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಕಾರು ಚಲಾಯಿಸುತ್ತಿರುವ ದಿಶಾ ಮದನ್ ನಂತರ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗುತ್ತಾರೆ. ದಿಶಾ ಮದನ್ ಹಾಗೂ ಪತಿ ಶಶಾಂಕ್ ವಾಸುಕಿ ಮುದ್ದು ಮಗುವಿನ ಆಗಮನಕ್ಕಾಗಿ ಕಾತರದಿಂದ ಕಾಯುವ ದೃಶ್ಯವೂ ಆ ವಿಡಿಯೋದಲ್ಲಿದೆ.

ಅಷ್ಟು ಮಾತ್ರವಲ್ಲದೇ ವಿಡಿಯೋದ ಕೊನೆಯಲ್ಲಿ ಮೊದಲ ಮಗ ವಿಯಾನ್ ಕೈಯನ್ನು ಒಬ್ಬೊಬ್ಬರಾಗಿ ತೆರೆಯುತ್ತಾರೆ. ಸಂಪೂರ್ಣ ಕೈ ತೆರೆದಾಗ ಅಲ್ಲಿ ಮಾರ್ಚ್ 01 2022, ಇದು ಹೆಣ್ಣು ಮಗು ಎಂದು ಬರೆದಿರುವಂತಹ ಸೊಗಸಾದ ದೃಶ್ಯವನ್ನು ಕೂಡಾ ಈ ವಿಡಿಯೋ ಒಳಗೊಂಡಿದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ವಿಡಿಯೋದ ಕೊನೆಯಲ್ಲಿ ತಮ್ಮ ಬಾಳಿನ ಪುಟ್ಟ ಲಕ್ಷ್ಮಿಯ ಮುಖವನ್ನು ತೋರಿಸಿದ್ದು, ಆ ಮೂಲಕ ಹೆಣ್ಣು ಮಗುವಿನ ಆಗಮನದ ವಿಚಾರವನ್ನು ಬಹಳ ಅಂದವಾಗಿ ಅನೌನ್ಸ್ ಮಾಡಿದ್ದಾರೆ.

ಇನ್ನು ದಿಶಾ ಮದನ್ ಅವರು ಕೇವಲ ಮಗಳ ಮುಖ ತೋರಿಸುವುದು ಅಲ್ಲದೇ ಮಗಳ ಹೆಸರನ್ನು ಕೂಡಾ ರಿವೀಲ್ ಮಾಡಿದ್ದಾರೆ. ಮುದ್ದು ಮಗಳಿಗೆ ‘ಅವಿರಾ’ ಎಂದು ಹೆಸರಿಟ್ಟಿದ್ದು ತಂಗಿಯನ್ನು ವಿಯಾನ್ ಎತ್ತಿಕೊಂಡಿರುವ ಫೋಟೋವನ್ನು ಸಹ ವೀಡಿಯೋದಲ್ಲಿ ಹಂಚಿಕೊಂಡಿದ್ದಾರೆ.

ಶಶಾಂಕ್ ವಾಸುಕಿ ಅವರನ್ನು ಮದುವೆಯಾಗಿರುವ ದಿಶಾ 2019ರಲ್ಲಿ ಗಂಡು ಮಗು ವಿಯಾನ್ ಗೆ ಜನ್ಮ ನೀಡಿದ್ದರು. ಮಗನ ಆಗಮನದ ನಂತರ ನಟನೆಯಿಂದ ದೂರವೇ ಇದ್ದ ದಿಶಾ ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಆಗಿದ್ದರು. ಇನ್ನು ದಿಶಾ ಗರ್ಭಿಣಿಯಾದ ಮೇಲೆಯೂ ಕ್ರಿಯೇಟಿವ್ ವಿಡಿಯೋ ಹಾಗೂ ಡ್ಯಾನ್ಸ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು.

ಕುಲವಧು ಧಾರಾವಾಹಿಯಲ್ಲಿ ವಚನಾ ಪಾತ್ರದಲ್ಲಿ ನಟಿಸಿ ಮನೆಮಾತಾಗಿದ್ದ ದಿಶಾ ವೈಯಕ್ತಿಕ ಕಾರಣಗಳಿಂದ ಸೀರಿಯಲ್ ತೊರೆದಿದ್ದರು. ನಂತರ ಫ್ರೆಂಚ್ ಬಿರಿಯಾನಿ , ಒನ್ ಕಟ್ ಟು ಕಟ್ ಹಾಗೂ ಹಂಬಲ್ ಪೊಲೀಟಿಶಿಯನ್ ನೊಗರಾಜ್ ವೆಬ್ ಸಿರೀಸ್ ನಲ್ಲಿ ನಟಿಸಿದ್ದಾರೆ.

Leave a Reply

Your email address will not be published. Required fields are marked *