• February 2, 2022

ಆ್ಯಕ್ಟರ್ ಆಗಿ ಭಡ್ತಿ ಪಡೆದ ರ್ಯಾಪರ್ ಇವರೇ ನೋಡಿ

ಆ್ಯಕ್ಟರ್ ಆಗಿ ಭಡ್ತಿ ಪಡೆದ ರ್ಯಾಪರ್ ಇವರೇ ನೋಡಿ

ಸಂಗೀತ ನಿರ್ದೇಶಕ ಹಾಗೂ ರ್ಯಾಪರ್ ಚಂದನ್ ಶೆಟ್ಟಿ ಇದೀಗ ನಾಯಕರಾಗಿ ಭಡ್ತಿ ಪಡೆದಿದ್ದಾರೆ‌. ಇದೇ ಮೊದಲ ಬಾರಿಗೆ ನಾಯಕರಾಗಿ ತೆರೆ ಮೇಲೆ ಬರಲಿರುವ ಚಂದನ್ ಶೆಟ್ಟಿ ತಮ್ಮ ನಟನಾ ಕೆರಿಯರ್ ಬಗ್ಗೆ ಉತ್ಸುಕರಾಗಿದ್ದಾರೆ. ರಿಯಾಲಿಟಿ ಶೋ ಹಾಗೂ ಮ್ಯೂಸಿಕ್ ನಲ್ಲಿ ಹೆಸರು ಗಳಿಸಿರುವ ಚಂದನ್ ಶೆಟ್ಟಿ, ಸುಜಯ್ ಶಾಸ್ತ್ರಿ ನಿರ್ದೇಶನದ
“ಎಲ್ರ ಕಾಲೆಳಿಯುತ್ತೆ ಕಾಲ” ಸಿನಿಮಾದಲ್ಲಿ ನಾಯಕರಾಗಿ ನಟಿಸುವ ಮೂಲಕ ನಟರಾಗಿ ಚಂದನವನಕ್ಕೆ ಕಾಲಿಡುತ್ತಿದ್ದಾರೆ. 70 -80 ರ ದಶಕದ ಕಾಲದ ಕಥೆಯನ್ನು ಈ ಸಿನಿಮಾವು ಹೊಂದಿದ್ದು ಇದರಲ್ಲಿ ಚಂದನ್ ಶೆಟ್ಟಿ ರೆಟ್ರೋ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸಿನಿಮಾದ ಪೋಸ್ಟರ್ ಹಂಚಿಕೊಂಡಿರುವ ಚಂದನ್ ಶೆಟ್ಟಿ “ಕನ್ನಡಿಗರಿಗೆ ನಮಸ್ಕಾರ…ನಾನು ಚಂದನ್ ಶೆಟ್ಟಿ ಹಾಡನ್ನು ಬರೆದು ಬರೆದು ಹಾಗೆ ಇಡ್ಕೊತಿದ್ದೆ, ಅ ಹಾಡುಗಳಿಗೆ ಒಂದು ಟ್ಯುನ್ ಹಾಕಿದೆ, ಕೈಯಲ್ಲಿ ಒಂದು ಗಿಟಾರ್, ತಲೇಲಿ ಸಾವಿರ ಯೋಚನೆ ಏನಾದ್ರು ಮಾಡಿ ದಬಾಯಿಸಿ ಹೊಡಿ ಬೇಕು ಅಂತ. ಆದರೆ ಸುತ್ತ ಮುತ್ತ ಸಪೋರ್ಟ್ ಮಾಡೋಕಿಂತ ಹೀಗೆಲ್ಲ ಮಾಡಿದ್ರೆ ಹಾಳಾಗಿ ಹೋಗೀಯ ಅನ್ನೋರೆ ಜಾಸ್ತಿ ಆದ್ರೂ, ಹಾಗಾಗಿ ಅದನ್ನೆ ನನ್ನ ಮೊದಲನೆ ಹಾಡು ಮಾಡ್ಕೊಂಡೆ , ನೀವೆಲ್ಲ ಆಶೀರ್ವಾದ ಮಾಡಿದಂಥ ಗೋಣಿಚೀಲನ ಇಡೋಕೆ ಮನೇಲಿ ಜಾಗ ಸಾಕಾಗದೆ ಒಂದು ದೊಡ್ಡ ಗೋಡೌನ್ ಕಟ್ಟಬೇಕಾಯ್ತು, ನೀವು ತೋರಿಸಿದ ಪ್ರೀತಿಗೆ ನಾನು ಖುಷಿಯಾಗಿ ಮೂರು ಪೆಗ್ ಹಾಕದೆ, ಊರಲ್ಲ, ರಾಜ್ಯ ಅಲ್ಲ, ದೇಶ ಅಲ್ಲ, ಇಡೀ ಜಗತ್ತೇ ಖುಷಿ ಪಟ್ಟಿತ್ತು ಜೊತೆಗೆ ನನ್ನ ಬೆನ್ನು ತಟ್ಟಿ ಹೇಳು ನೋಡು ಗುರು ನಮ್ ಕನ್ನಡ ನ ಯಾವ್ ರೇಂಜ್ ಗೆ ತಗೊಂಡು ಹೋಗ್ತಿದ್ದಾನೆ ಅಂತ. ಆ ಖುಷಿಯಲ್ಲಿ ಇದ್ದಾಗ ಬಿಗ್ ಬಾಸ್ ನಿಮ್ಮನ್ನು ಕರಿತದರೆ ಅಂದ್ರು, ಅದ್ರೆ ಏನಿದೆ ಅಂತ ಹೋಗಿ ನೋಡಿದೆ, ಬರಿ ಗೈಲ್ಲಿ ಬರ್ದಿರು ಹಾಗೆ ಟ್ರೋಪಿನು ತಗೊಂಡು ಬಾರಯ್ಯ ಅಂತ ಹೇಳಿ ನೀವು ಮತ್ತೆ ಆಶೀರ್ವಾದ ಮಾಡಿದ್ರಿ, ಇದಕ್ಕಿಂತ ಇನ್ನೇನು ಬೇಕು. ನಾನು ಮನುಷ್ಯ, ಸಾಹಸ ಮಾಡೋಕು ಅನ್ನೋ ಆಸೆ ಇದೆ, ಅದೇ ಹುಚ್ಚು ಆಸೆಯೊಂದಿಗೆ ನಿಮ್ಮ ಮುಂದೆ ನನ್ನ ಜೀವನದ ಮತ್ತೊಂದು ಅದ್ಯಾಯ ಪ್ರಾರಂಭ ಮಾಡ್ತಿದೀನಿ, ಅದೇ ನಟನೆ , ನನ್ನ ನಂಬಿ ಈಜಿ ಇಲ್ಲ ತುಂಬಾ ಕಷ್ಟ ಪಡ್ತಿದೀನಿ, ಪ್ರತಿ ಬಾರಿ ನನ್ನ ಗೆಲ್ಲಿದ್ದ ಹಾಗೆ ಇವಾಗು ಎಲ್ಲೂ ನನ್ನ ಕೈ ಇಡಿದು ಗೆಲ್ಲಿಸಬೇಕಾಗಿ ಕಳಕಳಿಯ ಮನವಿ ಮಾಡ್ತಿದೀನಿ ನನ್ ಹಾಡ್ ರಿಲೀಸ್ ಆದಾಗ ಹೆಂಗೆ ಮನ್ಸಬಿಚ್ಚಿಕುಣಿತಿದ್ರೋ ಹಾಗೆ ನಾನ್ ಬೆಳ್ಳಿ ಪರದೆ ಮೇಲೆ ಬಂದಾಗ ಖುಷಿ ಯಿಂದ ನೀವ್ ಹೊಡಿಯೊ ಚಪ್ಪಾಳೆ ಸಿಳ್ಳೆಗಳ ಸದ್ದು ಕೇಳೋ ಆಸೆ ಆಗಿದೆ ನಂಬಿದ್ದೇನೆ ಜೊತೆಗಿರಿ. ಇಂತಿ ನಿಮ್ಮ ಚಂದನ್ ಶೆಟ್ಟಿ( ವಿಜಯ್)” ಎಂದು ಬರೆದುಕೊಂಡಿದ್ದಾರೆ.

ರಾಜ್ ಬಿ ಶೆಟ್ಟಿ ಅವರ ” ಗುಬ್ಬಿ ಮೇಲೆ ಬ್ರಹ್ಮಾಸ್ತ್ರ” ಚಿತ್ರದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಸುಜಯ್ ಶಾಸ್ತ್ರಿ ಇದೀಗ ಎರಡನೇ ಚಿತ್ರದ ನಿರ್ದೇಶನದ ತಯಾರಿಯಲ್ಲಿದ್ದಾರೆ. ಇನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಜ ರಾಣಿ ಶೋವಿನಲ್ಲಿ ಚಂದನ್ ಅವರನ್ನು ಭೇಟಿ ಮಾಡಿದ್ದ ಸುಜಯ್ ಅವರ ಡೌನ್ ಟು ಅರ್ಥ್ ಗುಣಕ್ಕೆ ಮನಸೋತಿದ್ದರು. ಸುಜಯ್ ಕಥೆ ವಿವರಿಸಿದಾಗ ಚಂದನ್ ಇಷ್ಟಪಟ್ಟು ಒಪ್ಪಿಗೆ ನೀಡಿದ್ದಾರೆ.

ಗೋಕುಲ್ ಎಂಟರ್ ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಉಷಾ ಗೋವಿಂದರಾಜು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ರಾಜಗುರು ಹೊಸಕೋಟೆ ಅವರು ಕಥೆ , ಚಿತ್ರಕಥೆ , ಸಂಭಾಷಣೆ, ಪ್ರವೀಣ್- ಪ್ರದೀಪ್ ಅವರ ಸಂಗೀತ ನಿರ್ದೇಶನ ಹಾಗೂ ವಿಶ್ವಜಿತ್ ರಾವ್ ಅವರ ಫೋಟೋಗ್ರಾಫಿ ಈ ಚಿತ್ರಕ್ಕಿದೆ.

ಸಂಗೀತ ನಿರ್ದೇಶನದಲ್ಲಿ ಬ್ಯುಸಿಯಾಗಿರುವ ಚಂದನ್ ಶೆಟ್ಟಿ ರಾಣ ಹಾಗೂ ಹಂಟರ್ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಇವರ ಲಕ ಲಕ ಲಾಂಬೋರ್ಗಿನಿ ಸಾಂಗ್ ಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *