• November 22, 2021

ಯಶ್​ ನಟನೆಯ ‘ಕೆಜಿಎಫ್​ 2’ಗೆ ಹೆದರಿದ ಬಾಲಿವುಡ್​; ರಿಲೀಸ್​ ದಿನಾಂಕ ಮುಂದೂಡಿದ ಸ್ಟಾರ್​ ನಟ

ಯಶ್​ ನಟನೆಯ ‘ಕೆಜಿಎಫ್​ 2’ಗೆ ಹೆದರಿದ ಬಾಲಿವುಡ್​; ರಿಲೀಸ್​ ದಿನಾಂಕ ಮುಂದೂಡಿದ ಸ್ಟಾರ್​ ನಟ

ಏಪ್ರಿಲ್ 14ರಂದು ವರುಣ್ ಧವನ್ ಅಭಿನಯದ  ‘ಭೇಡಿಯಾ’ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಈಗ ಈ ಚಿತ್ರದ ರಿಲೀಸ್ ದಿನಾಂಕವನ್ನು ಮುಂದೂಡಲು ಸಿನಿಮಾ ತಂಡ ನಿರ್ಧರಿಸಿದೆ ಎನ್ನಲಾಗುತ್ತಿದೆ.

ಯಶ್ (Yash) ನಟನೆಯ ‘ಕೆಜಿಎಫ್ 2’ (KGF Chapter 2) ಸಿನಿಮಾ ಬಗ್ಗೆ ಇರುವ ನಿರೀಕ್ಷೆ ಸಣ್ಣಮಟ್ಟದಲ್ಲ. ಪ್ರಶಾಂತ್ ನೀಲ್ (Prashanth Neel) ಕಸುಬುದಾರಿಕೆ ಏನು ಎಂಬುದು ‘ಕೆಜಿಎಫ್’ ಮೂಲಕ ಪ್ರೇಕ್ಷಕರಿಗೆ ಗೊತ್ತಾಗಿದೆ. ಈ ಕಾರಣಕ್ಕೆ ‘ಕೆಜಿಎಫ್ ಚಾಪ್ಟರ್ 2’ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಂಜಯ್ ದತ್, ರವೀನಾ ಟಂಡನ್ ನಟಿಸಿರುವುದರಿಂದ ಸಿನಿಮಾದ ಬಲ ಹೆಚ್ಚಿದೆ. ಈ ಎಲ್ಲಾ ಕಾರಣಕ್ಕೆ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡೋಕೆ ಪ್ಲ್ಯಾನ್ ಹಾಕಿಕೊಳ್ಳಲಾಗಿದೆ. ಏಪ್ರಿಲ್ 14ರಂದು ಚಿತ್ರ ರಿಲೀಸ್ ಆಗುತ್ತಿದೆ. ಈಗ ಬಾಲಿವುಡ್ನ ಸ್ಟಾರ್ ನಟನ ಸಿನಿಮಾವೊಂದು ಸದ್ದಿಲ್ಲದೆ ರಿಲೀಸ್ ದಿನಾಂಕ ಮುಂದೂಡಿದೆ.

ಆಮಿರ್​ ಖಾನ್​ ನಟನೆಯ ‘ಲಾಲ್​ ಸಿಂಗ್​ ಚಡ್ಡಾ’ ಚಿತ್ರ ಕ್ರಿಸ್​ಮಸ್​ ನಿಮಿತ್ತ ಡಿಸೆಂಬರ್ ತಿಂಗಳಲ್ಲೇ ತೆರೆಗೆ ಬರಬೇಕಿತ್ತು. ಆದರೆ, ಅದು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಚಿತ್ರವನ್ನು ಫೆಬ್ರವರಿ ತಿಂಗಳಲ್ಲಿ ತೆರೆಗೆ ತರೋಕೆ ಪ್ಲ್ಯಾನ್​ ನಡೆದಿತ್ತು. ಅದು ಕೈಗೂಡಿಲ್ಲ. ಈಗ ಏಪ್ರಿಲ್​ 14ರಂದು ಆಮಿರ್​ ಖಾನ್​ ಸಿನಿಮಾ ರಿಲೀಸ್​ ಆಗುತ್ತಿದೆ. ಇದೇ ದಿನ ವರುಣ್​ ಧವನ್​ ಅಭಿನಯದ  ‘ಭೇಡಿಯಾ’ ಸಿನಿಮಾ ರಿಲೀಸ್​ ಆಗಬೇಕಿತ್ತು. ಆದರೆ, ಈಗ ಈ ಚಿತ್ರದ ರಿಲೀಸ್​ ದಿನಾಂಕವನ್ನು ಮುಂದೂಡಲು ಸಿನಿಮಾ ತಂಡ ನಿರ್ಧರಿಸಿದೆ ಎನ್ನಲಾಗುತ್ತಿದೆ.

‘ಕೆಜಿಎಫ್​’ ಬಾಲಿವುಡ್​ನಲ್ಲಿ ಒಳ್ಳೆಯ ಕಮಾಯಿ ಮಾಡಿತ್ತು. ಈ ಕಾರಣಕ್ಕೆ ‘ಕೆಜಿಎಫ್​ 2’ ಗೆ ದೊಡ್ಡ ಓಪನಿಂಗ್​ ಸಿಗುವ ಸಾಧ್ಯತೆ ಇದೆ. ಈ ಮೊದಲಿನಿಂದಲೂ ‘ಭೇಡಿಯಾ’ ಚಿತ್ರತಂಡ ಯಶ್​ ಸಿನಿಮಾ ಎದುರು ಬರಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿ ಇತ್ತು ಎನ್ನಲಾಗಿದೆ. ಈಗ ಆಮಿರ್​ ಖಾನ್​ ಚಿತ್ರ ಕೂಡ ಅದೇ ದಿನ ಬರುತ್ತಿರುವುದಕ್ಕೆ ರಿಲೀಸ್​ ದಿನಾಂಕ ಮುಂದೂಡುವ ನಿರ್ಧಾರಕ್ಕೆ ಬಂದಿದೆ ಎಂಬುದನ್ನು ಖಚಿತಪಡಿಸಿವೆ ಬಾಲಿವುಡ್​ ಮೂಲಗಳು.

‘ಕೆಜಿಎಫ್​ 2’ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಅದರ ಬಗ್ಗೆ ನಿರೀಕ್ಷೆ ಹುಟ್ಟೋಕೆ ಹಲವು ಕಾರಣಗಳಿವೆ. ರೇಸ್​ನಲ್ಲಿ ಆಮಿರ್​ ಖಾನ್​ ಸಿನಿಮಾವನ್ನು ‘ಕೆಜಿಎಫ್​ 2’ ಹಿಂದಿಕ್ಕಬಹುದು ಎಂಬ ಮಾತು ಪ್ರೇಕ್ಷಕರ ವಲಯದಲ್ಲಿ ಕೇಳಿ ಬರುತ್ತಿದೆ. ಈ ಎಲ್ಲಾ ಕಾರಣಕ್ಕೆ ‘ಭೇಡಿಯಾ’ ಚಿತ್ರ ಹಿಂದೆ ಸರಿದಿದೆ ಎನ್ನಲಾಗುತ್ತಿದೆ

Leave a Reply

Your email address will not be published. Required fields are marked *