- December 25, 2021
ದೊಡ್ಮನೆಯ ದೊಡ್ಡತನಕ್ಕೆ ಸಾಕ್ಷಿಯಾದ ಅಶ್ವಿನಿ ಪುನೀತ್

ಪತಿಯ ಅಗಲಿಕೆಯ ನೋವಿನಲ್ಲಿಯೂ ಪುನೀತ್ ರಾಜ್ಕುಮಾರ್ ಪತ್ನಿ ನಿರ್ಮಾಪಕರ ಪರ ನಿಂತಿದ್ದಾರೆ…
ಅಪ್ಪು ಅಗಲಿಕೆಗೂ ಮುನ್ನ ಸಿನಿಮಾ ಸಲುವಾಗಿ ಪಡೆದಿದ್ದ ಮುಂಗಡ ಹಣವನ್ನು ನಿರ್ಮಾಪಕರಿಗೆ ವಾಪಸ್ ನೀಡುವ ಕೆಲಸದಲ್ಲಿ ನಿರತರಾಗಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್

ಮೊನ್ನೆಯಷ್ಟೆ ನಿರ್ಮಾಪಕರೊಬ್ಬರಿಗೆ ನೀವು ನೀಡಿದ್ದ ಮುಂಗಡ ಹಣವನ್ನ ಬಂದು ಪಡೆದುಕೊಂಡು ಹೋಗಿ ಎಂದು ಅಶ್ವಿನಿ ಪುನೀತ್ ರಾಜ್ಕುಮಾರ್ ಕರೆ ಮಾಡಿದ್ದ ವಿಚಾರ ಎಲ್ಲೆಡೆ ವೈರಲ್ ಆಗಿತ್ತು…
ಈಗ ಕೆಲ ತಿಂಗಳ ಹಿಂದೆಯಷ್ಟೇ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅಪ್ಪುಗೆ ಸಿನಿಮಾ ಮಾಡುವ ಸಲುವಾಗಿ ಅಡ್ವಾನ್ಸ್ ನೀಡಿದ್ದರು..ಆದ್ರೆ ಸಿನಿಮಾ ಸೆಟ್ಟೇರುವ ಮುನ್ನವೇ ಅಪ್ಪು ಎಲ್ಲರನ್ನು ಬಿಟ್ಟು ಬಾರದೂರಿಗೆ ಪಯಣ ಬೆಳೆಸಿದ್ರು…ಅದ್ರೆ ಅಪ್ಪು ನಿಧನದಿಂದ ಯಾರಿಗೂ ತೊಂದರೆ ಆಗಬಾರದು ಎಂಬ ಕಾರಣದಿಂದ ಅಡ್ವಾನ್ಸ್ ಹಣ ವಾಪಸ್ ಮಾಡಿದ್ದಾರೆ ಅಶ್ವಿನಿ…

ಇಂದು ನಿರ್ಮಾಪಕ ಉಮಾಪತಿ ಅವರಿಗೆ ಅಡ್ವಾನ್ಸ್ ಹಣವಬ್ನು ವಾಪಸ್ ಮಾಡಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್…ಜೂನ್- ಜುಲೈನಲ್ಲಿ ಉಮಾಪತಿ ಬ್ಯಾನರ್ ನಲ್ಲಿ ಅಪ್ಪು ಅವರ ಸಿನಿಮಾ ಸೆಟ್ಟೇರಬೇಕಿತ್ತು
ಈಚಿತ್ರವನ್ನ ತರುಣ್ ನಿರ್ದೇಶನ ಮಾಡ್ತಾರೆ ಅಂತ ಸುದ್ದಿ ಆಗಿತ್ತು…ತರುಣ್ ಸುದೀರ್ ಪುನೀತ್ ರಾಜ್ ಕುಮಾರ್ ಅವರಿಗೆ ಈ ಹಿಙದೆಯೇ ಕತೆ ಹೇಳಿದ್ದರಂತೆ ಅದೇ ಕಥೆಯನ್ನ ಸಿನಿಮಾ ಮಾಡೋ ಪ್ಲಾನ್ ನಲ್ಲಿತ್ತು ತಂಡ…ಅದ್ರೆ ಪುನೀತ್ ರಾಜ್ ಕುಮಾರ್ ಅಕಾಲಿಕ ಮರಣದಿಂದ ಈ ಪ್ರಾಜೆಕ್ಟ್ ಕ್ಯಾನ್ಸಲ್ ಆಯ್ತು…ಪಡೆದ ಹಣವನ್ನ ಈಗ ಅಶ್ವಿನಿ ಹಿಂತಿರುಗಿಸಿದ್ದಾರೆ….

