• November 14, 2021

ಮರಳಿ ವಿದೇಶಕ್ಕೆ ಹೊರಟ ಪುನೀತ್ ರಾಜ್‍ಕುಮಾರ್ ‌ಪುತ್ರಿ !

ಮರಳಿ ವಿದೇಶಕ್ಕೆ ಹೊರಟ ಪುನೀತ್ ರಾಜ್‍ಕುಮಾರ್ ‌ಪುತ್ರಿ !

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳನ್ನ ಅಗಲಿ 15ದಿನಗಳೇ ಕಳೆದು ಹೋಯ್ತು…ಮನೆಯವ್ರು ಕೂಡ ಆಗಬೇಕಿದ್ದ ಎಲ್ಲಾ ಕಾರ್ಯಗಳನ್ನ ಮುಗಿಸಿ ಅಭಿಮಾನಿಗಳಿಗೂ ಅನ್ನದಾನ ಮಾಡಿ ಮುಗಿಸಿದ್ರು….ಎಲ್ಲಾ‌ಕಾರ್ಯ ಮುಗಿದ ನಂತ್ರ ಪುನೀತ್‌ಪುತ್ರಿ ಮತ್ತೆ ವಿದೇಶದತ್ತ ಮುಖ‌ಮಾಡಿದ್ದಾರೆ…

ಕಳೆದ ಐದಾರು ತಿಂಗಳ ಹಿಂದೆಯಷ್ಟೇ ಪುನೀತ್ ಪುತ್ರಿ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರೆಳಿದ್ರು…ನ್ಯೂಯಾರ್ಕ್ ‌ನಲ್ಲಿ ಡಿಗ್ರಿ ಕಲಿಯುತ್ತಿರೋ ದ್ರುತಿ ಅಪ್ಪನ‌ ಸಾವಿನ‌ ಸುದ್ದಿ ಕೇಳಿ ಓಡೋಡಿ ಬಂದಿದ್ರು…ಸದ್ಯ ಈಗ ಅಪ್ಪನ ಎಲ್ಲಾ ಕಾರ್ಯ ಮುಗಿಸಿ ಮತ್ತೆ ತಮ್ಮ ವಿದ್ಯಾಭ್ಯಾಸದ ಕಡೆ ಗಮನ ಹರಿಸಲು ಮುಂದಾಗಿದ್ದಾರೆ….ಅಪ್ಪು ಆಸೆ ಇದೇ ಆಗಿತ್ತು ..ಹೆಣ್ಣು ಮಕ್ಕಳು ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು ಸ್ವಾವಲಂಬಿಗಳಾಗಬೇಕು ಅನ್ನೋದೆ ಅವ್ರ ಆಸೆ ಹಾಗಾಗಿ ಅಪ್ಪನ ಕನಸನ್ನ ನನಸು ಮಾಡಲು ಅಪ್ಪು ಮಗಳು ಮುಂದಾಗಿದ್ದಾಳೆ …

ಇನ್ಮು ಧ್ರುತಿ ಬೆಂಗಳೂರಿನಿಂದ ನಿನ್ನೆಯಷ್ಟೆ ಹೊರಟಿದ್ದು ವಿನಯ್ ರಾಜ್ ಕುಮಾರ್ .ರಾಘವೇಂದ್ರ ರಾಜ್ ಕುಮಾರ್ .ಅಶ್ವಿನಿ ಪುನೀತ್.‌ ಪುನೀತ್ ಚಿಕ್ಕ ಮಗಳು ವಂದನಾ ಎಲ್ಲಾರೂ ಏರ್ ಪೋರ್ಟ್ ಗೆ ಹೋಗಿ ಮಗಳನ್ನ ಬಿಟ್ಟು ಬಂದಿದ್ದಾರೆ..ಇನ್ನು ನ್ಯೂಯಾರ್ಕ್ ನಲ್ಲಿ ಪುನೀತ್ ಸ್ನೇಹಿತರು ವಾಸವಾಗಿದ್ದು ಪುನೀತ್ ಪುತ್ರಿಯ ಕಾಳಜಿ ಜವಾಬ್ದಾರಿಯನ್ನ ತಾವು ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ

Leave a Reply

Your email address will not be published. Required fields are marked *